ರಾಯಚೂರು: ಗ್ರಾಮಾಂತರ ಕ್ಷೇತ್ರದ ಶಾಸಕರ ಕಾರ್ಯದಲ್ಲಿ ಇಂದು ಗಂಗಾಮತ ತರಿಗೆ ಮತ್ತು ಅಂಬಿಗರಿಗೆ ಬಲೇ ಮತ್ತು ಕಿಟ್ಟು ಸೇಫ್ಟಿ ಜಾಕೀಟ್ ವಿತರಣೆ ಮಾಡಿದರು.
ಅಂಬಿಗರು ನದಿಯಲ್ಲಿ ಮೀನುಗಳನ್ನು ಹಿಡಿದು ಮೀನುಗಳನ್ನು ಬೇರೆ ಹಳ್ಳಿಗಳಿಗೆ ಮತ್ತು ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡಲು ಬಹಳ ಕಷ್ಟವಿದ್ದು ಹಾಗಾಗಿ ಅವರಿಗೆ ವಾಹನದ ವ್ಯವಸ್ಥೆಯು ಕೂಡ ಮಾಡಲಾಗುತ್ತದೆ ಮತ್ತು ಫಲಾನುಭವಿಗಳಿಗೆ ಸುಮಾರು 100 ರಿಂದ 150 ಮನೆಗಳನ್ನು ಈಗಾಗಲೇ ಶಾಸಕರು ಫಲಾನುಭವಿಗಳ ನಿವೇಶನಕ್ಕಾಗಿ ಸರ್ಕಾರಕ್ಕೆ ಪತ್ರವನ್ನು ಕೂಡ ಬರೆದಿದ್ದಾರೆ ಎಂದು ತಿಳಿಸಿದರು ಇನ್ನು ಕೆಲವೇ ದಿನಗಳಲ್ಲಿ ನಿಮ್ಮೆಲ್ಲರಿಗೆ ನಿವೇಶನ ಮತ್ತು ವಾಹನಗಳ ಅನುಕೂಲ ಮಾಡಿಕೊಡುತ್ತೇನೆ ಎಂದು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಗೌಡ ತಲಮಾರಿ. ಪವನ್ ಪಾಟೀಲ್. ಪಂಪಾಪತಿ. ಮಲ್ಲಿಕಾರ್ಜುನ ನಾಯಕ ಗೋನಾಳ್. ನರಸಿಂಹ ನಾಯಕ್. ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ