Ad imageAd image

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಬಸನಗೌಡ ದದ್ದಲ್

Bharath Vaibhav
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಬಸನಗೌಡ ದದ್ದಲ್
WhatsApp Group Join Now
Telegram Group Join Now

ರಾಯಚೂರು: ಗ್ರಾಮಾಂತರದ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುರುಡಿ ಗ್ರಾಮದಲ್ಲಿ ಇಂದು ಐದು ಜೋಡಿ ಸಾಮೂಹಿಕ ವಿವಾಹಗಳು ನಡೆಯುತ್ತಿದ್ದು ಇಂತಹ ಸಾಮೂಹಿಕ ವಿವಾಹ ಮತ್ತು ಕಾರ್ಯಕ್ರಮಗಳು ಜರಗುತ್ತಿರುವುದು ನನಗೆ ಬಹಳ ಸಂತೋಷದ ವಿಷಯ ನನ್ನ ಗ್ರಾಮೀಣ ಕ್ಷೇತ್ರದಲ್ಲಿ ಮಾಡುತ್ತಿರುವ ಕಾರ್ಯಕ್ರಮಗಳಿಗೆ ನಾನು ಸದಾ ತಮ್ಮ ಜೊತೆಗಿರುತ್ತೆನೆ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾಗುತ್ತಿರುವ ವಧು ವರರ ಪುಣ್ಯದ ಕೆಲಸ ಸಾವಿರಾರು ಜನರ ಆಶೀರ್ವಾದ ಎಲ್ಲಾ ಪರಮಪೂಜ್ಯರ ಗಣ್ಯರ ಋಷಿಮುನಿಗಳ ಆಶೀರ್ವಾದ ಸಿಗಬೇಕಾದರೆ ಪೂರ್ವಜರ ಪುಣ್ಯವಿರಬೇಕೆಂದು ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ದದ್ದಲ್ ತಿಳಿಸಿದರು.

ಕುರ್ಡಿ ಗ್ರಾಮದ ಪ್ರಭಾಕರ್ ಶೆಟ್ಟಿ ರವರು ನೀವು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರಾರಂಭಿಸಿ ನಾನು ವದು ವರರಿಗೆ ಐದು ಮಾಂಗಲ್ಯಗಳನ್ನು ಕೊಡುತ್ತೇನೆಂದು ಮಠದ ತಾತನವರಿಗೆ ತಿಳಿಸಿದರು.

ಒಂದು ವೇಳೆ ನಾನು ಸಾಮೂಹಿಕ ವಿವಾಹ ಕಾರ್ಯಕ್ರಮ ಮುಗಿಯುವದರೊಳಗಾಗಿ ನಾನೇನಾದರೂ ಸತ್ತರೆ ನಾನು ನನ್ನ ಮಗನಿಗೆ ಸಾಮೂಹಿಕ ವಿವಾಹಕ್ಕೆ ಐದು ಮಾಂಗಲ್ಯಗಳನ್ನು ವಿತರಣೆ ಮಾಡಲು ತಿಳಿಸಿ ಸಾಯುತ್ತೇನೆ ಎಂದು ತಾತನವರಿಗೆ ವಚನ ಕೊಟ್ಟಿದ್ದರು ಕೊಟ್ಟ ಮಾತಿನಂತೆ ಪ್ರಭಾಕರ್ ಶೆಟ್ಟಿಯವರು ಇಂದು ಐದು ಮಾಂಗಲ್ಯಗಳನ್ನು ಪ್ರಭಾಕರ್ ಶೆಟ್ಟಿಯವರು ವಧು ವರರಿಗೆ ವಿತರಣೆ ಮಾಡಿದರು

ಶ್ರೀ ಪರಮಪೂಜ್ಯ ಸದ್ಗುರು ಶ್ರೀ ರಾಜಯೋಗಿ ಫಡಿವೆಡಿಕಿ ತಾತನವರ ದಿವ್ಯ ಪ್ರಕಾಶದಲ್ಲಿ ನಡೆಯುವ ಆರಾಧನಾ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರದಲ್ಲಿ ಶಾಸಕರು ಬಸನಗೌಡ ಗದಲ್ ರವರು ಭಾಗವಹಿಸಿ ನೂತನ ವಿವಾಹ ಜೋಡಿಗಳಿಗೆ ಶುಭ ಕೋರಿ ಶುಭಾಶಯಗಳು ತಿಳಿಸಿದರು.

ಈ ಸಂದರ್ಭದಲ್ಲಿ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮಿಗಳು ಸಾವಿರ ದೇವರ ಸಂಸ್ಥಾನ ಮಠ. ಕಿಲ್ಲರ್ ಮಠದ ಶಾಂತ ಮಲ್ಲಯ್ಯ ಶಿವಾಚಾರ್ಯರು. ಮೌನೇಶ್ ಮಹಾರಾಜ ಗಾರಲದಿನ್ನಿ. ಮಠಾಧೀಶರು ಮತ್ತು ಕುರ್ಡಿ ಗ್ರಾಮದ ಪ್ರಭಾಕರ್ ಶೆಟ್ಟಿ. ಮತ್ತು ಭಕ್ತಾದಿಗಳು ಗ್ರಾಮದ ಸಾರ್ವಜನಿಕರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.

ವರದಿ: ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!