ರಾಯಚೂರು: ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರಸಿದ್ಧ ಹೆಸರುವಾಸಿಯಾದ ಸೂಗೂಗುರೇಶ್ವರ ದೇವಸ್ಥಾನದ ವಿವಿಧ ಕಾಮಗಾರಿಗಳ ಅಭಿವೃದ್ಧಿಯನ್ನು ಕುರಿತು ರಾಯಚೂರು ಸಹಾಯ ಆಯುಕ್ತರ ಮುಜರಾಯಿ ಇಲಾಖೆ ಅಧಿಕಾರಿಗಳು ತಾಸಿಲ್ದಾರರು ಮತ್ತು ಇ ಓ ಹಾಗೂ ದೇವಸ್ಥಾನದ ಟ್ರಸ್ಟ್ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳೊಂದಿಗೆ ದೇವಸ್ಥಾನದ ಖಾತೆಗೆ ಜಮಾ ಆಗಿರುವ ಹಣದ ಬಗ್ಗೆ ಮತ್ತು ಅಲ್ಲಿನ ಆಭರಣಗಳ ಬಗ್ಗೆ ಚರ್ಚೆ ನಡೆಸಲಾಯಿತು.
ರಾಯಚೂರು ಜಿಲ್ಲಾಧಿಕಾರಿಗಳು ಮತ್ತು ಸಹಾಯಕಾಯುಕ್ತರು ಟ್ರಸ್ಟ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಮತ್ತು ಊರಿನ ಗ್ರಾಮಸ್ಥರು ಹಿರಿಯ ಮುಖಂಡರುಗಳೊಂದಿಗೆ ಸೂಗೂರೇಶ್ವರ ದೇವಸ್ಥಾನದಲ್ಲಿ ಮಾಡುವ ಕಾಮಗಾರಿಯನ್ನು ಅಡಿಗಲ್ಲು ಸಮಾರಂಭ ಮಾಡುತ್ತೇವೆಂದು ತಿಳಿಸಿದರು. ಮತ್ತು ಕಲ್ಮಲಾ ಕರಿಯಪ್ಪ ತಾತನ ದೇವಸ್ಥಾನದ ಬಗ್ಗೆ ಕರಿಯಪ್ಪ ತಾತನ ದೇವಸ್ಥಾನದ ವಂಶಸ್ಥರು ಐದು ಕುಟುಂಬಗಳಿದ್ದು ಆ ದೇವಸ್ಥಾನದ ಬಗ್ಗೆ ಜಿಲ್ಲಾಧಿಕಾರಿಗಳು ಬಂದ ನಂತರ ಅದರ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಸಭೆಯಲ್ಲಿ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ಗದ್ದಲ್ ರವರು ತಿಳಿಸಿದರು.
ವರದಿ: ಗಾರಲದಿನಿ ವೀರನಗೌಡ