ಚಿಕ್ಕೋಡಿ: ಚಿಕ್ಕೋಡಿ ಪಟ್ಟಣದಲ್ಲಿ ಸುಮಾರು 45 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮುದಾಯ ಭವನವನ್ನು ಶಾಸಕ ಹುಕ್ಕೇರಿ ಉದ್ಘಾಟಿಸಿದರು.
ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿಯವರ ವಿಶೇಷ ಪ್ರಯತ್ನದಿಂದ ಈ ಸಮುದಾಯ ಭವನವನ್ನು ನಿರ್ಮಿಸಲಾಗಿದೆ ಈ ಸಮುದಾಯ ಭವನವನ್ನು ಶಾಸಕ ಗಣೇಶ ಹುಕ್ಕೇರಿ ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಬೇಪಾರಿ ಸಮಾಜದ ಪ್ರತ್ಯೇಕವಾದ ಸಮುದಾಯ ಭವನವನ್ನು kನಿರ್ಮಾಣ ಮಾಡಿಕೊಡಬೇಕೆಂದು ಸಮಾಜದ ಬಾಂಧವರು ನಮ್ಮ ಬಳಿ ಮನವಿಯನ್ನು ಮಾಡಿಕೊಂಡಾಗ ತಕ್ಷಣವೇ ಹಣ ಮಂಜೂರಾತಿ ಮಾಡಿ, ಕಾಮಗಾರಿಗೆ ಚಾಲನೆ ನೀಡಿ ಇವತ್ತು ಸುಂದರವಾದ ಸುಸರ್ಜತಿವಾದ ಸಮುದಾಯ
ಭವನ ತಲೆಯೆತ್ತಿ ನಿಂತಿದೆ.
ಸಮುದಾಯ ಭವನವು ಸಮಾಜದ ಬಾಂಧವರ ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲ ವಾಗಲಿ ಎಂದರು. ಅದಲ್ಲದೆ ಕಸಾಯಿ ಖಾನೆಗೆ ಪ್ರತ್ಯೇಕವಾದ ಜಾಗವನ್ನು ಮಂಜೂರಾತಿ ಮಾಡಿಕೊಡಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಭರವಸೆಯನ್ನು ನೀಡಿದರು.
ಬಳಿಕ ಪುರಸಭೆ ಉಪಾಧ್ಯಕ್ಷ ಇರ್ಫಾನ್ ಬೇಪಾರಿ ಮಾತನಾಡಿ ಎಂಎಲ್ಸಿ ಪ್ರಕಾಶ ಹುಕ್ಕೇರಿ ಶಾಸಕ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ ನಮ್ಮ ಬೇಪಾರಿ ಸಮಾಜಕ್ಕೆ ಸುಂದರವಾದ ಸಮುದಾಯ ಭವನವನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಅದಕ್ಕೆ ನಾನು ನಮ್ಮ ಸಮಾಜದ ಪರವಾಗಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅವರು ನಮ್ಮ ಸಮಾಜದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಿಕೊಂಡು ಬರುತ್ತಿದ್ದಾರೆ ಎಂದರು.
ಪುರಸಭೆ ಹಿರಿಯ ಸದಸ್ಯ ರಾಮಾ ಮಾನೆ ಮಾತನಾಡಿ ಶಾಸಕ ಗಣೇಶ ಹುಕ್ಕೇರಿ ಎಂಎಲ್ಸಿ ಪ್ರಕಾಶ ಹುಕ್ಕೇರಿ ಯವರು ಎಲ್ಲ ಸಮಾಜದ ಬಾಂಧವರ ಅವಶ್ಯಕತೆ ಅನುಗುಣವಾಗಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಅದರಂತೆ ಬೇಪಾರಿ ಸಮಾಜದ ಬಹುದಿನಗಳ ಬೇಡಿಕೆಯಾದ ಸಮುದಾಯ ಭವನ ನಿರ್ಮಾಣ ಕನಸು ಇವತ್ತು ನನಸಾಗಿದೆ ಎಂದರು. ಆ ಕಾರಣಕ್ಕಾಗಿ ಹುಕ್ಕೇರಿ ಕುಟುಂಬದ ಜೊತೆಗೆ ಬೆನ್ನಿಗೆ ನಿಲ್ಲಿ ಎಂದರು.
ಈ ಸಂಧರ್ಭದಲ್ಲಿ ಅನೀಲ ಮಾನೆ,ಗುಲಾಬಹುಸೇನ ಬಾಗವಾನ,ಪ್ರಭಾಕರ ಕೋರೆ,ಮಜೀದ ಬೇಪಾರಿ, ವಿನೋದ ಮಾಳಗೆ,ಶ್ರೀಮಂತ ಮಾಳಗೆ,ಯೂಸುಫ್ ಚೌದ್ರಿ,ದಸ್ತಗೀರ ಚೌದ್ರಿ,ಮೇರಾ ಚೌದ್ರಿ,ನೂರ ಬೇಪಾರಿ, ಬಾಷಾ ಬೇಪಾರಿ,ಇಸ್ಮಾಯಿಲ್ ಬೇಪಾರಿ,ಹುಸೈನ್ ಬೇಪಾರಿ, ಸಲಾಂನ ಬೇಪಾರಿ, ಅಯೂಬ ಬೇಪಾರಿ, ಮಜೀದ ಚೌದ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ