ಮಾನ್ವಿಯಲ್ಲಿ 10ನೆ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ
ಮಾನ್ವಿ ಪ್ರವಾಸಿ ಮಂದಿರದಲ್ಲಿ ಮಾಹಿತಿ ತಿಳಿಸಿದ ಶಾಸಕ ಹಂಪಯ್ಯ ನಾಯಕ
ಫೆಬ್ರವರಿ 27ರಂದು ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಲಿದೆ
ಕನ್ನಡ ಅಭಿಮಾನಿಗಳು ಭಾಗವಹಿಸುವಂತೆ ಕರೆ
ಮಾನ್ವಿ : ಮಾನ್ವಿ ಪಟ್ಟಣದಲ್ಲಿ ಫೆಬ್ರವರಿ 27ರಂದು 10ನೆ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಹಂಪಯ್ಯ ನಾಯಕ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆಬ್ರವರಿ 27ರಂದು ವಾಸವಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಕನ್ನಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಳಗದವರು ಪ್ರೋಟಾಕಾಲ್ ಪ್ರಕಾರವಾಗಿ ಕಾರ್ಯಕ್ರಮದ ತಯಾರಿ ಮಾಡಬೇಕು.ಹಾಗೆಯೇ ಎಲ್ಲಾ ರೀತಿಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದರ ಜೊತೆಗೆ ಯಾರಿಗೂ ನೋವುಂಟಾಗದಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.




