ಸಿಂಧನೂರು :ಅಂಬಾಮಠದಲ್ಲಿ ಜನವರಿ 2 ರಿಂದ ಪ್ರಾರಂಭವಾಗುವ ಜಾತ್ರೆ ಪ್ರಯುಕ್ತ ವಿವಿಧ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಗುರುವಾರ ಬೆಳಿಗ್ಗೆ ಪೂರ್ವಭಾವಿ ಸಭೆಯನ್ನು ಶಾಸಕ ಹಂಪನಗೌಡ ಬಾದರ್ಲಿ ನಡೆಸಿ, ರಾಜ್ಯ ಮತ್ತು ಇಡೀ ದೇಶದಲ್ಲೇ ಹೆಸರುವಾಸಿಯಾದ ಅಂಬಾಮಠ ವನ್ನು ಹಾಸನಾಂಬೆ, ಧರ್ಮಸ್ಥಳದ ಮಾದರಿಯಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುವುದು. ಲೈಟಿಂಗ್, ಚರಂಡಿ, ಫುಟ್ ಪಾತ್, ರಥಬೀದಿ, ಶೌಚಾಲಯ, ಪ್ರಸಾದ ನಿಲಯ, ಆಸ್ಪತ್ರೆ, ಪೊಲೀಸ್ ಠಾಣೆ, ಬಯಲು ರಂಗಮಂದಿರ, ಸೇರಿದಂತೆ ಕೆ.ಆರ್.ಐ.ಡಿ.ಎಲ್ ಹಾಗೂ ಕೆ.ಕೆ.ಆರ್.ಡಿ.ಬಿ. ಯೋಜನೆ ಅನುದಾನದಲ್ಲಿ ಕಾಮಗಾರಿ ಅಭಿವೃದ್ಧಿ ಪಡಿಸಲಾಗುತ್ತದೆ.
ದೇವಸ್ಥಾನದ ಕಟ್ಟಡ 6 ಕೋಟಿ 63 ಲಕ್ಷ ಸಂಪೂರ್ಣ ಅಭಿವೃದ್ಧಿ ಪಡಿಸಿ, ದೇಶದಲ್ಲಿಯೇ ಒಂದು ಮಾದರಿ ಪೀಠಶಕ್ತಿಯ ಕ್ಷೇತ್ತವನ್ನಾಗಿ ಆಕರ್ಷಣೆ ಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ದೇವಸ್ಥಾನದ ಹಣ ದುರುಪಯೋಗ ಆರೋಪ ಶುದ್ದ ಸುಳ್ಳು ದೇವಸ್ಥಾನ ಪವಿತ್ರ ಸ್ಥಳ, ಯಾವುದೇ ಕಾರಣಕ್ಕೆ ಒಂದು ರೂಪಾಯಿ ಸಹ ದುರುಪಯೋಗ ಆಗಿಲ್ಲ. ಆಗುವುದು ಇಲ್ಲ. ದೇವಸ್ಥಾನದ ಶ್ರೀಚಕ್ರ ಪವಿತ್ರತೆ ಉಳಿಯಬೇಕು ಎಂದು ಅರ್ಚಕರು ಹೇಳಿದ ಕಾರಣ ಅದನ್ನು ಅಲ್ಲಿಯೇ ಉಳಿಸಲಾಗಿದೆ. ಕಟ್ಟಿದ ದೇವಸ್ಥಾನ ಕಟ್ಟಡವನ್ನು ತೆರವುಗೊಳಿಸಿಲ್ಲ ಎಂದರು.

ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾತನಾಡಿ, ವಾಸ್ತು, ಆಯಾ, ಮುಜರಾಯಿ ಇಲಾಖೆಯ ಅಭಿಪ್ರಾಯ ಒಳಗೊಂಡು ಅಂಬಾದೇವಿ ದೇವಸ್ಥಾನವು ನಿರ್ಮಾಣ ಆಗಬೇಕಾಗಿದೆ. ಇದರಲ್ಲಿ ಯಾರು ರಾಜಕೀಯ ಬಣ್ಣ ಬಳಿಯಬಾರದು. ಶಾಸ್ತ್ರ ಬದ್ಧವಾಗಿ ಕಟ್ಟಿ ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಪ್ರವಾಸಿ ತಾಣವನ್ನಾಗಿ ಸಕಲ ಸದ್ಭಕ್ತರಿಂದ ಆಕರ್ಷಣೆಗೊಳಿಸಬೇಕು ಎಂದರು.
ಈ ವೇಳೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಸವರಾಜ ಹಿರೇಗೌಡರ್, ಎನ್.ಅಮರೇಶ, ರಾಜುಗೌಡ, ದೇವಸ್ಥಾನ ಸಮತಿ ಅಧ್ಯಕ್ಷ ರಂಗನಗೌಡ ಗೋರೆಬಾಳ, ಸ್ತ್ರೀ ಶಕ್ತಿ ತಾಲೂಕು ಘಟಕ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ, ಇಒ ಚಂದ್ರಶೇಖರ್, ಪೌರಾಯುಕ್ತ ಪಾಂಡುರಂಗ ಇಟಗಿ, ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




