ವಿಜಯಪುರ : ಗ್ಯಾರಂಟಿ ಯೋಜನೆ ಗಳಿಂದ ಅಭಿವೃದ್ಧಿ ಕುಂಠಿತವಾಗಿಲ್ಲ ರಾಜ್ಯದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳ ಲಾಭ ಜಾತ್ಯತೀತ ಧರ್ಮ ತೀವ್ರವಾಗಿ ಎಲ್ಲಾ ಜನರಿಗೆ ತಲುಪುತ್ತಿದೆ. ಸರ್ಕಾರ ಗ್ರಾಮಗಳ ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಪರಿಹಾರ ಕಂಡು ಕೊಳ್ಳುವ ವಿನೂತನ ಪ್ರಯತ್ನ ಮಾಡುವುದಕ್ಕಾಗಿ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗುತ್ತಿದ್ದು ಸುತ್ತಮುತ್ತಲ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಅಶೋಕ ಎಂ ಮನಗೂಳಿ ಹೇಳಿದರು.
ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತ ಪರವಾಗಿ ” “ಶಾಸಕರ ಜನ ಸಂರ್ಪಕ ಸಭೆಯಲ್ಲಿ ಅವರು ಮಾತನಾಡಿ ಪ್ರತಿ ಗ್ರಾಮಗಳಿಗೆ ಅಧಿಕಾರಿಗಳು ಜನರ ಸಮಸ್ಯ ಆಲಿಸಿ ಸ್ಥಳದಲ್ಲಿ ಸಮಸ್ಯ ಪರಿಹರಿಸಬೇಕು ಸರಕಾರ ಹಲವಾರು ಗ್ಯಾರಂಟಿ ಯೋಜನೆಗಳು ಜಾರಿಗೆ ತಂದಿರುವ ಯೋಜನೆಗಳು ಜನರಿಗೆ ಮುಟ್ಟಿಸಬೇಕು .ಗ್ರಾಮದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ
ರಸ್ತೆ .ಶಾಲಾ ಕೋಣೆ .ಶಾಲಾ ಸುತ್ತಲು ತಡಗೋಡೆ . ಶೌಚಾಲಯ ಹಾಗೂ ಕ್ಯಾನಲ್ ಇವುಗಳ ಸಮಸ್ಯಗಳು ಇರುವದು ಕಂಡು ಬಂತು ಅವು ಹಂತ ಹಂತವಾಗಿ ಕೆಲಸ ಮಾಡುವದು ಎಂದರು.
ಚಿಕ್ಕಸಿಂದಗಿ ಬಂದಾಳ ಗ್ರಾಮದ ಮಾದೇವಪ್ಪ ಜೋಗೂರ ಹಾಗೂ ಸವಿತಾ ಉಕ್ಕಲಿ ತಮ್ಮ ಮನವಿಯಲ್ಲಿ ಗ್ರಾಮ ಪಂಚಾಯತ ಪರವಾಗಿ 2016ರಲ್ಲಿ ಮನೆ ಮಂಜೂರವಾಗಿದರು ಇನ್ನೂ ನಮ್ಮಗೆ ಹಣ ಬಂದಿಲ್ಲಾ ಎಂದು ಅರೋಪಿಸಿದರು. ಬಂದಾಳ ಗ್ರಾಮದ ಮಲ್ಲಿಕಾರ್ಜುನ ಭೀ ಹಿರೇಕುರಬರ ಹಾಗೂ ಶ್ರೀವಸ್ತ ಉಕ್ಕಲಿ. ಗುರು ಮುರಗಾನೂರ ಮುರಗಾನೂರ ವಸ್ತಿ ಶಾಲೆ ಹಾಗೂ ನಮ್ಮ ಊರಿನಲ್ಲಿ ಸರಕಾರಿ ಶಾಲೆಯಲ್ಲಿ 419 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ ಅವರಿಗೆ ಸರಿಯಾದ ವರ್ಗದ ಕೋಣೆಗಳು ಇಲ್ಲಾ ಮತ್ತು ಶಾಲಾ ಸೂತ್ತ ಮೂತ್ತಲಿ ತಡಗೋಡೆ ಹಾಗೂ ಬಿಸಿ ಊಟದ ಕೋಣೆ ಗಂಡು ಮಕ್ಕಳಿಗೆ ಶೌಚಾಲಯ ಗ್ರಾಮದ ಮಹಿಳೆಯರಿಗೆ ಶೌಚಾಲಯ ಚರಂಡಿ ತಕ್ಷಣ ನಿರ್ವಮಿಸಬೇಕು ಎಲ್ಲಾ ಹಳ್ಳಿಗಳಲ್ಲಿ ಸರಿಯಾಗಿ ಬಹು ಹಳ್ಳಿಯ ಕುಡಿಯುವ ನೀರು ಸರಿಯಾಗಿ ಬಾರದೆ ಇರುದರಿಂದ ತುಂಬಾ ತೊಂದರೆಯಾಗಿದೆ ಅದು ಸರಿ ಪಡಿಸಿರಿ ಎಂದರು.
ಬಹು ಹಳ್ಳಿಯ ಕುಡಿಯುವ ನೀರಿ ಪೈಪಲೈನಗೆ ಕೆಲವು ರೈತರು ತಮ್ಮ ತೋಟಕ್ಕೆ ನೀರು ಬಳಿಸಿ ಕೊಳ್ಳುತ್ತಾರೆ ಅವರಿಗೆ ತಿಳಿ ಹೇಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಚಿಕ್ಕಸಿಂದಗಿ ಗ್ರಾಮದ ವಾರ್ಡದ ಹೆಣ್ಣು ಮಕ್ಕಳಿಗೆ ಶೌಚಾಲಯದ ತುಂಬಾ ತೊಂದರೆ ಇದೆ ಮತ್ತು ನಮ್ಮ ಗ್ರಾಮದಿಂದ ಹಲವು ವಿದ್ಯಾರ್ಥಿನಿಯರು ಕಾಲೇಜಕ್ಕೆ ಹೋಗುತ್ತಾರೆ ಅವರಿಗೆ ಬಸ್ಸು ಸೌಲಭ್ಯ ಮಾಡಬೇಕು ಮತ್ತು ಎಲ್ಲಾ ಬಸ್ಸುಗಳು ನಿಲ್ಲಸಿಬೇಕು ತಕ್ಷಣ ಸಮಸ್ಯ ಪರಿಹಾರ ಮಾಡಬೇಕು ಎಂದು ಭಾಗ್ಯ ಶ್ರೀ ಬಿರಾದಾರ ತಿಳಿಸಿದರು. ಚಿಕ್ಕಸಿಂದಗಿ ಗ್ರಾಮದ ಪರಸುರಾಮ ಬಗಲಿ.ಚಂದ್ರಕಾಂತ ಬೂದಿಹಾಳ .ಪರಸುರಾಮ ದೇವಣಗಾಂವ ನಮ್ಮ ಊರಿನ ಮೇಲೆ ಕ್ಯಾನಲ್ ಮಂಜೂರ ಆಗಿದೆ ಆದರು ಇನ್ನೂವರಿಗೆ ಸಂಪೂರ್ಣವಾಗಿ ಮುಗಿಸಿ ನೀರು ಬಂದರೆ ನಮ್ಮ ರೈತರು ತಮ್ಮಗೆ ಅಭಿನಂದಿಸುತ್ತಾರೆ ಕಾರಣ ನೀರು ಬರುವಂತೆ ಮಾಡಬೇಕು ಎಂದು ಅರೋಪಿಸಿದರು.
ಓತಿಹಾಳ ಗ್ರಾಮದ ಸಿ ಎಂ ದೇವರಡ್ಡಿ .ನಿಂಗನಗೌಡ ಬಿರಾದಾರ.ಶಿವಾನಂದ ಸಾಲಿಮಠ .ಎಂ.ಎಂ.ದೊಡಮನಿ.ಜಿ.ಎನ್.ನಡಕೂರ.ಈರಣ್ಣ ಕಡಿಮನಿ ಅವರು ಮಾತನಾಡಿ ಸಿಂದಗಿ ಯಿಂದ ಹರನಾಳ ಗ್ರಾಮದವರಿಗೆ ಉತ್ತಮ ರಸ್ತೆ ನಿರ್ಮಿಸಬೇಕು ಹೈಸ್ಕೂಲ .ಉರ್ದು ಶಾಲೆ .ಪ್ರಾಥಮಿಕ ಶಾಲೆಯ ಸುತ್ತ ಮೂತ್ತಲಿನ ತಡಗೊಡೆ ಮಕ್ಕಳಿಗೆ ಶುದ್ದವಾದ ಕುಡಿವು ನೀರು ಕೊಡಬೇಕು. ಗ್ರಾಮದಲ್ಲಿ ಪಶು ಆಸ್ವತ್ರೆ ಮಂಜೂರ ಮಾಡಿಸಬೇಕು. ಗ್ರಾಮದ ಮೇಲೆ ಕ್ಯಾನಲ ಹಾದು ಹೋಗಿದೆ ಅದು ಸಿದ್ದಲಿಂಗೇಶ್ವರ ದೇವಾಲಯದ ಹತ್ತಿರ ನೀರು ಬರುತ್ತದೆ ಸ್ವಲ್ಪ ಖರ್ಚು ಮಾಡಿ ಪಾಯಿಪ ಹಾಕಿಸಬೇಕು ಎಂದರು.
ಬೂದಿಹಾಳ ಪಿ ಎಚ್ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಟಿ ಸಿ ಇದೆ ಇದರಿಂದ ಮಕ್ಕಳಿಗೆ ತುಂಬಾ ತೊಂದರಿ ಮಾಡಿದೆ ಅದು ಸ್ಥಳಂತರ ಮಾಡಬೇಕು ಎಂದು ಸುನೀತಾ ಅರಿ ಗುರುಮಾತ್ಯರು ತಿಳಿಸಿದರು.ಶಿವಶರಣ ಗು ಹರಿಜನ ಮಾತನಾಡಿ ಬೂದಿಹಾಳ ಪಿ ಎಚ್ ಗ್ರಾಮದಲ್ಲಿ ಮುಖ್ಯ ರಾಜ್ಯ ಕಾಲುವೆ ಇದೆ ಅದು ಸಂಪೂರ್ಣ ಮುಚ್ಚಿ ಹೋಗಿ ನೀರು ರಸ್ತೆ ತುಂಬಾ ಹರಿಯುವದರಿಂದ ಗಬ್ಬುವಾದ ವಾಸನೆ ಬಂದರು ಪಂಚಾಯತ ಅಧಿಕಾರಿಗಳು ಗಮನ ಹರಿಸಿಲ್ಲಾ ಶಾಲೆಯಲ್ಲಿ ಒಂದೆ ಒಂದು ಶೌಚಾಲಯ ಇದೆ ಆ ಶೌಚಾಲಯದಲ್ಲಿ ಗಂಡು ಹೆಣ್ಣು ಬಳಿಸುತ್ತಾರೆ. ಮತ್ತು ಗ್ರಾಮದ ಸೂತ್ತ ಮೂತ್ತಲು ಚಾಲಿ ಕಂಟಿ ಬೇಳೆದು ನಿಂತಿದೆ .ಶಾಲೆಯ ಸುತ್ತ ಮೂತ್ತಲು ಊರಿನ ಜನರು ಮಲ ಮೂತ್ರ ಮಾಡುತ್ತಾರೆ ಅದು ನಿಲ್ಲಬೇಕು. ಗ್ರಾಮಕ್ಕೆ ಸರಿಯಾಗಿ ನೀರು ಬರುವದಿಲ್ಲಾ ಒಂದು ಎತ್ತರವಾದ ನೀರಿನ ಟ್ಯಾಂಕ ನಿರ್ಮಿಸಬೇಕು ಎಂದರು.
ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ.ಕೃಷಿ ಅಧಿಕಾರಿ ಚಂದ್ರಕಾಂತ ಪವಾರ ಮಾತನಾಡಿದರು.
ವೇದಿಕೆ ಮೇಲೆ ತಹಶೀಲ್ದಾರ ಪ್ರದೀಪ ಹಿರೇಮಠ. ಶಿವಣ್ಣ ಕೋಟಾರಗಸ್ತಿ.ನೂರಹಮ್ಮದ ಅತ್ತಾರ .ಶ್ರೀಶೈಲ ಕೌಲಗಿ. ಅರವಿಂದ್ರ ಡೊಣ್ಣೂರ. ಗ್ರಾಮ ಪಂಚಾಯತ್ ಅಧ್ಯಕ್ಷರು ಯಮನಪ್ಪ ಹೊಸಮನಿ ಉಪಾಧ್ಯಕ್ಷ ಸರೂಬಾಯಿ ಶಂ ನಾಗಾವಿ ವೇದಿಕೆ ಮೇಲೆ ಇದ್ದರು. ಸದಸ್ಯರು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು
ಬಂದಾಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ,.ಗ್ರಾಮ ಪಂಚಾಯತ ಕಾರ್ಯದರ್ಶಿ ಆರ್ ಎಂ ಮುಜಾವರ . ಮುಖ್ಯ ಶಿಕ್ಷಕ ಎನ್ ಕೆ ಚೌಧರಿ ಸ್ವಾಗತಿಸಿದರು.ಶಿಕ್ಷಕ ಚಂದ್ರಶೇಖರ ಬೂಯ್ಯಾರ ನಿರೂಪಿಸಿದರು.ಶಿಕ್ಷಕ ಬಸವರಾಜ ಅಗಸರ ವಂದಿಸಿದರು.
ವರದಿ. ಸಾಯಬಣ್ಣ ಮಾದರ