Ad imageAd image

ಪದವಿ ವಿದ್ಯಾರ್ಥಿಗಳೊಂದಿಗೆ ಶಾಸಕ ಕಂದಕೂರು ಸಂವಾದ 

Bharath Vaibhav
ಪದವಿ ವಿದ್ಯಾರ್ಥಿಗಳೊಂದಿಗೆ ಶಾಸಕ ಕಂದಕೂರು ಸಂವಾದ 
WhatsApp Group Join Now
Telegram Group Join Now

ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು : ಕಂದಕೂರು ಸಲಹೆ

ಗುರುಮಠಕಲ್ : ಗುರುಮಾಠಕಲ್ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕರು ಹಾಗೂ ಕಾಲೇಜಿನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶರಣಗೌಡ ಕಂದಕೂರ ಭೇಟಿ ನೀಡಿ ವಿಧ್ಯಾರ್ಥಿಗಳೊಂದಿಗೆ ಸುಧೀರ್ಘ ಸಮಾಲೋಚನೆ ಮಾಡಿ ಮಾತನಾಡಿದರು.

ಶಾಸಕ ಶರಣಗೌಡ ಕಂದಕೂರ ಜೊತೆ ಸಂವಾದದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಗ್ರಂಥಾಲಯ ಸೇರಿದಂತೆ ಕಾಲೇಜಿಗೆ ಬೇಕಾಗಿರುವ ವಿವಿಧ ಮೂಲಭೂತ ಸೌಕರ್ಯಕ್ಕೆ ಬೇಡಿಕೆ ಇಟ್ಟಿರುವ ವಿದ್ಯಾರ್ಥಿಗಳು

ಸಭೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟರು. ಸುಮಾರು 700 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಓದುತ್ತಿದ್ದು, ವಿಧ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಾಲೇಜಿನ ಫಲಿತಾಂಶ ಈ ಭಾರಿ ನಿರೀಕ್ಷೆಯಂತೆ ಉತ್ತಮವಾಗಿದ್ದು, ಕಾಲೇಜಿನ ಕೆಲ ಸಮಸ್ಯೆಗಳ ಕುರಿತು ಶಾಸಕರ ಗಮನಕ್ಕೆ ತಂದರು.

ಸ್ಥಳದಲ್ಲಿ ಕೆಲವು ಸಮಸ್ಯೆಗಾಳಿಗೆ ಅಧಿಕಾರಿಗಳಿಗೆ ಕರೆ ಮಾಡುವ ದರ ಮೂಲಕ ಸಮಸ್ಯೆಗಳಿಗೆ ಪಾರಿಯರ ಮಾಡಿದ ಜನಪ್ರಿಯ ಶಾಸಕರು

ಕಾಲೇಜು ಆವರಣದ ಮುಂಭಾಗದ ಖಾಲಿ ಸ್ಥಳದಲ್ಲಿ ಸಾಯಂಕಾಲ ಪ್ರವೇಶಿಸಿ ಮದ್ಯಪಾನ ಸೇರಿದಂತೆ ಪುಂಡಾಟ ಮಾಡುತ್ತಿರುವ ಕುರಿತು ಪೊಲೀಸ್ ಇಲಾಖೆಗೆ ಹೆಚ್ಚಿನ್ ಗಸ್ತು ವಹಿಸಲು ತಿಳಿಸಿದರು.
ವಿದ್ಯಾರ್ಥಿಗಳು ಕಾಲೇಜು, ವಸತಿ ನಿಲಯದಲ್ಲಿ ನೀರು ಮತ್ತು ಊಟದ ಕುರಿತು, ಕಾಲೇಜಿಗೆ ಕೋರಿಕೆಯ ಬಸ್ ನಿಲುಗಡೆ, ಹೈಟೆಕ್ ಗ್ರಂಥಾಲಯ, ಗ್ರಾಮೀಣ ಪ್ರದೇಶದಿಂದ ಬರುತ್ತಿರುವ ವಿಧ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾದ ಬಸ್, ಪುಸ್ತಕಗಳು, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ, ಪೀಠೋಪಕರಣಗಳು, ಎಲ್ಇಡಿ ವಿದ್ಯುತ್ ಮತ್ತು ಸೋಲಾರ್ ದೀಪಗಳ ವ್ಯವಸ್ಥೆ, ಕ್ರೀಡಾಂಗಣ ಸೇರಿದಂತೆ ಹಲವು ಸಮಸ್ಯೆ ಹೇಳುತ್ತಿದ್ದಂತೆ ಆಯಾ ಇಲಾಖೆಯ ಅಧಿಕಾರಿಗಳಗೆ ಸೂಚನೆ ನೀಡಿ ತಕ್ಷಣಕ್ಕೆ ಭೇಟಿ ನೀಡಿ ಬಗೆಹರಿಸಲು ಶಾಸಕರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು

ಕೋಟಿ 20 ಲಕ್ಷ ವೆಚ್ಚದ ಹೈಟೆಕ್ ಗ್ರಂಥಾಲಯ ಹಾಗೂ ಸುಮಾರು 5 ಎಕರೆ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ತಮ್ಮ ಮುಂದಿನ ಕನಸಿನ ಪ್ರಾಜೆಕ್ಟ್ ಬಗ್ಗೆ ತಿಳಿಸಿದರು.

ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾದ ಅಥಿತಿ ಉಪನ್ಯಾಸಕರ ಕುರಿತು ಅಧಿವೇಶನದಲ್ಲಿ ಪ್ರಸ್ತಾವನೆ ಮಾಡುವದಗಿ ಭರವಸೆ ನೀಡಿದರು.
ಪ್ರಮುಖವಾಗಿ ರಾಯಚೂರ ವಿಶ್ವ ವಿದ್ಯಾನಿಲಯದಿಂದ ವಿಧ್ಯಾರ್ಥಿಗಳಿಗೆ ಅಂಕಪಟ್ಟಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸುಧೀರ್ಘ ಚರ್ಚೆ ನಡೆಸಿದ ಶಾಸಕರು ತ್ವರಿತ ಗತಿಯಲ್ಲಿ ಈ ಕುರಿತು ಬಗೆಹರಿಸುವದಾಗಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಭೋದಕ ವರ್ಗದವರು ಸಮನ್ವಯ ಕಾಪಾಡಿಕೊಂಡು ಮಕ್ಕಳ ಫಲಿತಾಂಶ ವೃದ್ಧಿಗೆ ಶ್ರಮಿಸಿ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಪ್ರಪಂಚದಲ್ಲಿ ತಾಳ್ಮೆ ಮತ್ತು ಸಹನೆಯಿಂದ ಇದ್ದಾಗ ಮಾತ್ರ ಉನ್ನತ ಸ್ಥಾನದಲ್ಲಿ ಬೆಳೆಯಲು ಸಾಧ್ಯ, ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಸಾಧನೆ ಮಾಡಬೇಕಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ನೀಡಲು ತಾವು ಯಾವಾಗಲೂ ಸಿದ್ಧ ಹಾಗೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗದಂತೆ ಅಣ್ಣನ ಸ್ಥಾನದಲ್ಲಿ ನಿಂತು ನಿಮಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಆಶ್ವಾಸನೆ ಕೊಟ್ಟರು.

ಉಪನ್ಯಾಸಕರೊಂದಿಗೆ ಸಭೆ ನಡೆಸಿ, ಕಾಲೇಜಿಗೆ ಗ್ರಾಮೀಣ ಪ್ರದೇಶದಿಂದ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದು, ವಿದ್ಯಾರ್ಥಿಗಳ ಸಮಸ್ಯೆ, ಮನಸ್ಥಿತಿ ಅರಿತು ಸ್ಪಂದಿಸಿ ಕಾರ್ಯನಿರ್ವಹಿಸಿ. ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದರು.

ಪ್ರಾಂಶುಪಾಲರಾದ ಡಾ. ಜಿ.ವಿ.ಪುರುಷೋತ್ತಮ, ಪ್ರೋ. ಅಂಜನೇಯ, ಡಾ. ವೆಂಕಟೇಶ್, ಇಮ್ರಾನ್ ಖಾಸಿಂ,ಬಾಬು ದೊರೆ, ಜಗದೀಶ್ ಅವಂಟಿ,ಮಲ್ಲಮ್ಮ , ಗೋವಿಂದ ಮೆಂಗಜಿ, ದೀಪಕ್ ಬೆಳ್ಳಿ ಜ್ಞಾನೇಶ್ವರ್ ರೆಡ್ಡಿ ಡಾ. ಪ್ರೊಪೋಸ್ ಕೃಷ್ಣ ಚೇಪೆಟ್ಲ ಉಪನ್ಯಾಸಕ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.

ವರದಿ : ರವಿ ಬುರನೋಳ್

WhatsApp Group Join Now
Telegram Group Join Now
Share This Article
error: Content is protected !!