ಸುವರ್ಣಸೌಧ : ರಾಜ್ಯದಲ್ಲಿ ಟಿಪ್ಪು ಜಯಂತಿಯನ್ನು ಪುನಾರಂಭಿಸುವಂತೆ ಒತ್ತಾಯಿಸಿ ಅಧಿವೇಶನದಲ್ಲಿ ಪ್ರಸ್ತಾಪಿಸಲು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮುಂದಾಗಿದ್ದಾರೆ.
ವಿಧಾನಸಭೆಯಲ್ಲಿ ಇಂದು ಅವರು ಟಿಪ್ಪು ಜಯಂತಿಯನ್ನು ಪುನಾರಾರಂಭಿಸುವಂತೆ ಅವರು ಪ್ರಸ್ತಾಪ ಮಾಡಲಿದ್ದಾರೆ.ಗಮನ ಸೆಳೆಯುವ ಸೂಚನಾ ಕಲಾಪದಲ್ಲಿ ಕಾಶಪ್ಪನವರ್ ಟಿಪ್ಪು ಜಯಂತಿ ಕುರಿತು ಪ್ರಸ್ತಾಪಿಸಲಿದ್ದಾರೆ.
ವಿಧಾನಸಭೆಯ ಇಂದಿನ ಕಾರ್ಯಕ್ರಮ ಪಟ್ಟಿಯಲ್ಲಿ ವಿಷಯ ಸೇರ್ಪಡೆಯಾಗಿದೆ. ಗಮನ ಸೆಳೆಯುವ ಸೂಚನೆ ಪಟ್ಟಿಯಲ್ಲಿ ಈ ವಿಷಯ ಸೇರ್ಪಡೆಯಾಗಿದ್ದು, ಟಿಪ್ಪು ಜಯಂತಿ ಪುನಾರಂಭದ ಬಗ್ಗೆ ವಿಸ್ತೃತ ಚರ್ಚೆ ನಡೆಯುವ ಸಾಧ್ಯತೆ ಇದೆ.




