Ad imageAd image

ಕ್ರೀಡೆಯಲ್ಲಿ ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ : ಶಾಸಕ ಲಕ್ಷ್ಮಣ ಸವದಿ

Bharath Vaibhav
ಕ್ರೀಡೆಯಲ್ಲಿ ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ : ಶಾಸಕ ಲಕ್ಷ್ಮಣ ಸವದಿ
WhatsApp Group Join Now
Telegram Group Join Now

ಅಥಣಿ: ಕ್ರೀಡಾ ಪಟುಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಕ್ರೀಡೆಯಲ್ಲಿ ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು  ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಥಣಿ ಹಾಗೂ ವರ್ಧಮಾನ ಶಿಕ್ಷಣ ಸಂಸ್ಥೆ ಸಂಕೋನಟ್ಟಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪ್ರಾಥಮಿಕ ತಾಲೂಕಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟಗಳ ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ರೀಡೆಯಲ್ಲಿ ಗೆದ್ದವರು ಶ್ರೇಷ್ಠರಲ್ಲ ಸೋತವರು ಕೀಳಲ್ಲ ಎನ್ನುವುದನ್ನು ಅರಿತುಕೊಳ್ಳುವುದಷ್ಟೇ ಅಲ್ಲ ಕ್ರೀಡಾ ಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಕಿವಿ ಮಾತು ಹೇಳಿದರು . ಕ್ರೀಡಾ ಪಟುಗಳು ರಾಜ್ಯ ಮತ್ತು ದೇಶ ಹಾಗೂ ತಾಲೂಕು ಮಟ್ಟದ ಕೀರ್ತಿ ತರಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ವರ್ಧಮಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್ ಎಂ ಅಸ್ಕಿ ಹಾಗೂ ಸಮನ್ವಯ ಅಧಿಕಾರಿಗಳಾದ ಜಿ. ಬಿ. ಖೋತ. ಗ್ರಾಮ ಪಂಚಾಯತ ಅಧ್ಯಕ್ಷರು ಶಂಕರ ರಾ ಗಡದೆ. ಹಾಗೂ ಗ್ರಾಮ ಪಂಚಾಯತ ಉಪಾಧ್ಯಕ್ಷರು ಶ್ರೀಮತಿ ರೂಪಾ ಭರಮು ಸೋನಕರ.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಿ.ಜಿ ಕಡಗಂಚಿ. ಶ್ರೀ ವರ್ಧಮಾನ ಸಂಸ್ಥೆಯ ಉಪಾಧ್ಯಕ್ಷರಾದ. ಆರ್ ಬಿ ಪಾಟೀಲ. ಎ.ಬಿ.ಬಸರಿಖೋಡಿ ಕಾರ್ಯದರ್ಶಿಗಳು ಶ್ರೀ ವ.ಶಿ.ಸಂ. ಸಂಕೋನಟ್ಟಿ. ವ.ಶಿ.ಸಂ. ನಿರ್ದೇಶಕರಾದ ಅರುಣ ಯಲಿಗುದ್ರಿ ಹಾಗೂ ಎಸ್ ಕೆ. ಬಸರಿಖೋಡಿ ಅನಂತ್ ಅನೇಕರು ಸೇರಿದಂತೆ ಶ್ರೀ ವರ್ಧಮಾನ ಶಿಕ್ಷಣ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಪ್ರಾಥಮಿಕ & ಪ್ರೌಢ ವಿಭಾಗದ ವಿವಿಧ ಸಂಘಗಳ ಅಧ್ಯಕ್ಷರು ವಿದ್ಯಾರ್ಥಿಗಳು ಅನೇಕರು ಉಪಸ್ಥಿತರಿದ್ದರು. ಪ್ರಮಾಣ ವಚನ ಎನ್.ಬಿ.ಯಲಿಗೌಡರ ಸ್ವೀಕರಿಸಿದ್ದರು.

ಈ ಕಾರ್ಯಕ್ರಮವನ್ನು ಎಸ್.ಎಂ. ಅಸ್ಕಿ ಅಧ್ಯಕ್ಷರು ಶ್ರೀ ವ.ಶಿ.ಸಂ. ಸಂಕೋನಟ್ಟಿ ಸ್ವಾಗತಿಸಿದರು. ವಿ.ಬಿ.ಮೇತ್ರಿ ಹಾಗೂ ಬಿ.ಪಿ. ಲಡಗೆ. ನಿರೂಪಿಸಿದರು. ಶ್ರೀಮತಿ ದೀಪಶ್ರೀ ಧರಿಗೌಡ ವಂದಿಸಿದರು.

ವರದಿ : ರಾಜು ವಾಘಮಾರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!