ಅಥಣಿ : ಪಟ್ಟಣದ ರಾಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಸರಸ್ವತಿ ಭಾವ ಚಿತ್ರಕ್ಕೆ ಪೂಜೆ ಸಲಿಸುವ ಮೂಲಕ ಶಾಸಕ ಲಕ್ಷ್ಮಣ್ ಸವದಿ ಚಾಲನೆ. ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಹೊರ ತರಲು ಸರ್ಕಾರ ಇಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಹೊರ ತರುವ ಮುಖಾಂತರ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಲ್ಲಿಕಾರ್ಜುನ್ ಮುಂಜೆ ಅವರು ಮಾತನಾಡಿ ತಾಲೂಕಿನ 24 ಕ್ಲಸ್ಟರ್ ಮಟ್ಟದ ವಿದ್ಯಾರ್ಥಿಗಳು ಕಲೆ ಸಾಹಿತ್ಯ ನೃತ್ಯ ಪ್ರಬಂಧ ಚಿತ್ರಕಲೆ ರಂಗೋಲಿ ಸ್ಪರ್ಧೆ ಗಾಯನ ಮಕ್ಕಳು ವಿವಿಧ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ವಿದ್ಯಾವರ್ಧಕದ ಸಂಸ್ಥೆಯ ಅಧ್ಯಕ್ಷರಾದ ಶಿವಶಂಕರ್ ಹಂಜಿ. ರಾಯಲ್ ಸ್ಕೂಲ್ ಸಂಸ್ಥೆಯ ಅಧ್ಯಕ್ಷರಾದ ರಫೀಕ್ ಡಾಂಗೆ. ಎಸ್ ವೈ ಗಸ್ತಿ, ಎಸ್ ವೈ ಹೊಡೆದಾರ್ , ಎಸ್ ಬಿ ಕರೋಶಿ,ಎ ವೈ ಹೈಬತಿ,ಡಿ ಬಿ ಮಗಾಡಿ, ವಿಶ್ವ ಕುಮಾರ್ ಮಾಳಿ ಶಿಕ್ಷಕರು ಮತ್ತು ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ವರದಿ : ಸುಕುಮಾರ ಮಾದರ




