ರಾಯಬಾಗ: ತಾಲೂಕಿನ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ಕೇ. ತಮ್ಮನವರ ಇವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿದರು.
ಮೊರಬ ಗ್ರಾಮದಲ್ಲಿ ಫೇವರ್ಸ್ ಬ್ಲಾಕ್ ಅಳವಡಿಕೆ ಕಾರ್ಯಕ್ಕೆ ಹತ್ತು ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಂಡಿದ್ದು. ಅದರ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ಅದೇ ರೀತಿ ಕುಡಚಿ ಪಟ್ಟಣದಲ್ಲಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ. ಸ್ಥಳೀಯರಿಗೆ ಶುದ್ಧ ನೀರಿನ ಸುಲಬ ಸೌಲಭ್ಯ ಒದಗಿಸಿದರು.

ಹಾಗೂ ಸಿದ್ದಾಪುರ ಗ್ರಾಮದಲ್ಲಿ ಎಸ್ ಸಿ ಪಿ ಅನುದಾನದಲ್ಲಿ. 10 ಲಕ್ಷ ರೂಪಾಯಿಗಳ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಹಾಗೂ ಸ್ಥಳೀಯರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ವರದಿ : ಭರತ ಮೂರಗುಂಡೆ




