ಬೆಂಗಳೂರು : ನಾನು ಅತ್ಯಾಚಾರ ಮಾಡಿದ್ರೆ ರಕ್ತ ಕಾರಿ ಸಾಯುತ್ತೇನೆ. ಕಾಲಬೈರವನ ಆಣೆ ಮಾಡಿ ಹೇಳಿ ಹೇಳುತ್ತೇನೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಆರ್.ಆರ್. ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ತಪ್ಪು ಮಾಡಿದ್ರೆ ರಕ್ತ ಕಾರಿ ಸಾಯಬೇಕು.
ಸುಳ್ಳು ದೂರು ಕೊಡಬಾರದು. ನನ್ನ ಬಳಿ ಯಾರೇ ಬಂದರೂ ಏನಮ್ಮ, ಏನು ತಾಯಿ ಅಂತ ಹೆಣ್ಣುಮಕ್ಕಳನ್ನು ಮಾತನಾಡಿಸುತ್ತೇನೆ. ಆದರೆ ದೇವರಾಣೆಗೂ ನಾನು ಯಾವುದೇ ತಪ್ಪು ಮಾಡಿಲ್ಲ ಎಂದರು.
ನೀವು ಕೊಟ್ಟ ಭಿಕ್ಷೆ ಶಾಸಕ ಸ್ಥಾನವನ್ನು ನಾನು ಬಿಟ್ಟುಕೊಡಲ್ಲ. ನನ್ನ ಕಳಿಸಿ ನೀವು ಏನಪ್ಪ ಬಾಳ್ತೀರಾ ಇಲ್ಲಿ, ನನ್ನ ಮುಂದೆ ರಾಜೀನಾಮೆ ಕೊಡಿ ಅನ್ನಿ ಕೊಡುತ್ತೇನೆ. ಒಂದು ಮಗಳು ಇನ್ಮೊಂದು ಹೆಣ್ಣು ಮಗಳ ಮೇಲೆ ದೂರು ಕೊಡಬಾರದು. ಸುಳ್ಳು ದೂರು ಕೊಡಲು ಹೋಗಬಾರದು.
ನಾಳೆ ಅವರ ಮಕ್ಕಳ ಭವಿಷ್ಯ ಏನು ಅಂತ ಯೋಚಿಸಬೇಕು. ನಿಮ್ಮ ಸ್ವಾರ್ಥಕ್ಕೆ ನೀವು ಎಂಎಲ್ ಎ ಆಗಬೇಕು ಯಾಕೆ ಇನ್ನೊಬ್ಬರ ಮನೆ ಹಾಳು ಮಾಡ್ತೀರಾ ಅಂತ ವಾಗ್ದಾಳಿ ನಡೆಸಿದ್ದಾರೆ.