————————————–ಮ್ಯಾಸರಹಟ್ಟಿ ಗ್ರಾಮದಲ್ಲಿ 154 ಮನೆಗಳಿಗೆ ಈ ಸ್ವತ್ತು
ಮೊಳಕಾಲ್ಮೂರು : ನಮ್ಮ ಸರ್ಕಾರದಿಂದ ಅನೇಕ ಜನಪರ ಯೋಜನೆಗಳನ್ನು ಜನರಿಗೆ ಮುಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದ್ದೇವೆ ಅದಕ್ಕೆ ಉದಾಹರಣೆ ಎಂಬಂತೆ 60-70 ವರ್ಷಗಳಿಂದ ನಿನಗೊಂದಿಗೆ ಬಿದ್ದಿದ್ದ ಸುಡುಗಾಡು ಸಿದ್ದರ ನಿವೇಶನಗಳ ಹಕ್ಕುಪತ್ರ ವಿತರಣೆ,ಮ್ಯಾಸರಟ್ಟಿ ಗ್ರಾಮದಲ್ಲಿ 154 ಮನೆಗಳಿಗೆ ಈ ಸ್ವತ್ತು ವಿತರಣೆ ಮಾಡಿದ್ದೇವೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣರವರು ತಿಳಿಸಿದರು.
ತಾಲೂಕಿನಲ್ಲಿ ಶನಿವಾರ ಜಿಲ್ಲಾಡಳಿತ ಚಿತ್ರದುರ್ಗ ಜಿಲ್ಲಾ ಪಂಚಾಯತಿ ಚಿತ್ರದುರ್ಗ ತಾಲೂಕು ಪಂಚಾಯಿತಿ ಮೊಳಕಾಲ್ಮೂರು ಗ್ರಾಮ ಪಂಚಾಯಿತಿ ರಾಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಪಧಿನಾನ್ ದೇವರಹಟ್ಟಿ ಕಂದಾಯ ಗ್ರಾಮ ಎಂದು ಘೋಷಿಸಿ ಅವರು ಮಾತನಾಡಿದರು
ಸರ್ಕಾರದಿಂದ ಅನೇಕ ಯೋಜನೆಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು, ಗ್ರಾಮ ಪಂಚಾಯಿತಿಯವರು ಉತ್ತಮ ಕೆಲಸ ಮಾಡಿದ್ದಲ್ಲಿ ಹಳ್ಳಿಗಳು ಅಭಿವೃದ್ಧಿಯಾಗುತ್ತವೆ, ಅದೇ ರೀತಿ ಸುಡುಗಾಡು ಸಿದ್ದರ ಅನೇಕ ವರ್ಷಗಳಿಂದ ನಿನಗೊಂದಿಗೆ ಬಿದ್ದಿದ್ದ ನಿವೇಶನ ಹಕ್ಕು ಪತ್ರ ವಿತರಣೆಯನ್ನು ತಾಲೂಕು ಆಡಳಿತದಿಂದ ನೆರವೇರಿಸಲಾಯಿತು
ತಾಲೂಕಿನಲ್ಲಿ 15 ಹಳ್ಳಿಗಳಲ್ಲಿ ಮನೆಗಳ ಯಾವುದೇ ದಾಖಲಾತಿಗಳಿಲ್ಲದೆ ಜೀವನ ಸಾಗಿಸುತ್ತಿದ್ದರು ಅಂತಹ ಗ್ರಾಮಗಳನ್ನು ಗುರುತಿಸಿ ಸುಮಾರು12 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿ ಬೇಕಾದ ದಾಖಲೆಗಳನ್ನು ಒದಗಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಕೆಲಸ ಮಾಡುತ್ತಿದೆ ಎಂದರು.
ಮ್ಯಾಸರಹಟ್ಟಿಯಲ್ಲಿ ಕಟ್ಟಿರುವ 154 ಮನೆಗಳಿಗೆ ಅಧಿಸೂಚನೆ ಹೊರಡಿಸಿ, ಈ ಜಮೀನಿನ , ಪ್ರತಿ ಮನೆಯನ್ನು ನಾವು ಅಳತೆ ಮಾಡಿ ನಿಖರವಾಗಿ ಈ ಸ್ವತ್ತು ನೀಡುತ್ತಿದ್ದೇವೆ ಎಂದು ತಹಸೀಲ್ದಾರರಾದ ಟಿ ಜಗದೀಶ್ ರವರು ತಿಳಿಸಿದರು
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಈ ಓ ಹನುಮಂತಪ್ಪ ಮಾತನಾಡಿ ಅದೆಷ್ಟು ವರ್ಷಗಳಿಂದ ನಿನಗುಂದಿಗೇ ಬಿದ್ದಿದ್ದ ಸುಡುಗಾಡು ಸಿದ್ಧರ ನಿವೇಶನ ಹಕ್ಕುಪತ್ರಕ್ಕೆ ಈಗ ಜೀವ ಬಂದಿದೆ, 81 ಜನಕ್ಕೆ ನಾವು ನಿವೇಶನಕ್ಕಾಗಿ ಹಕ್ಕು ಪತ್ರ ನೀಡುತ್ತಿದ್ದೇವೆ ಈಗ 19 ಜನಕ್ಕೆ ನೀಡಿದ್ದೇವೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ನೀಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಸುಡುಗಾಡು ಸಿದ್ದರ ಹಕ್ಕು ಪತ್ರ ಪಡೆದು ಮುರುಡಪ್ಪ ಮಾತನಾಡಿ ನಾವು ಸುಮಾರು 60 70 ವರ್ಷಗಳಿಂದ ಇದೇ ಜಾಗದಲ್ಲಿ ವಾಸ ಮಾಡುತ್ತಾ ಜೀವನ ನಡೆಸುತ್ತೇವೆ.ಯಾವ ರಾಜಕೀಯ ವ್ಯಕ್ತಿಗಳು ಕೂಡ ನಮ್ಮನ್ನು ಗುರುತಿಸಿ ಹಕ್ಕುಪತ್ರ ನೀಡಿಲ್ಲ ಎಲ್ಲಾ ರಾಜಕಾರಣಿಗಳು ಕೂಡ ಆಶ್ವಾಸನೆ ನೀಡುತ್ತಾ ಹೋದರು. ಆದರೆ ಎನ್ ವೈ ಗೋಪಾಲಕೃಷ್ಣ ಬಂದಮೇಲೆ ಹಕ್ಕುಪತ್ರ ನೀಡಿದ್ದಾರೆ ಅದೇ ರೀತಿ ಮನೆಗಳನ್ನು ಕಟ್ಟಿಸಿಕೊಡಬೇಕು , ಅವರಿಗೆ ಧನ್ಯವಾದಗಳು, ಮೂಲಸೌಕರ್ಯಗಳಾದ ,ರಸ್ತೆಗಳು ಸಮುದಾಯ ಭವನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದು ಅಂಗನವಾಡಿ ಆಗಬೇಕಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಸಮಿತಿಯ ಜಿಲ್ಲಾ ಸದಸ್ಯರಾದ ಜಿಪಿ ಸುರೇಶ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕರಾದ ನಂದೀಶ್ ರಾಯಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕರಿಬಸಮ್ಮ, ಉಪಾಧ್ಯಕ್ಷರಾದ ಡಿ ಬೋರಯ್ಯ, ಸದಸ್ಯರುಗಳಾದ, ಜಿ ಪಿ ಪಾಪಣ್ಣ, ವೈಡಿ ಕುಮಾರಸ್ವಾಮಿ, ಬೋಸಯ್ಯ ಮಲ್ಲಿಕಾರ್ಜುನ, ಸರಸ್ವತಿ, ಬೋರಮ್ಮ, ನಾಗರಾಜ್, ಭಾಗ್ಯಮ್ಮ, ಶಶಿಕಲಾ,ಮೀನಾಕ್ಷಿ, ಬಸವರಾಜ್,ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಶ್ರೀಕಾಂತ್, ಪಿಡಿಒ ನೂರುಲ್ಲಾ ಇನ್ನು ಹಲವರು ಮಹಿಳೆಯರು ಉಪಸ್ಥಿತರಿದ್ದರು.
ವರದಿ: ಪಿ.ಎಂ ಗಂಗಾಧರ




