ಮೊಳಕಾಲ್ಮೂರು : ನಾವುಗಳು ಯಾವುದೇ ಭಾಷೆ ಮಾತನಾಡಿದರು ಕೂಡ ಕನ್ನಡದ ಪ್ರಬುದ್ಧತೆ ಹೆಚ್ಚಾಗಬೇಕೆಂದರೆ ಪ್ರತಿಯೊಬ್ಬರೂ ಭಾಷೆ ಪ್ರೇಮ ಮೈಗೂಡಿಸಿಕೊಳ್ಳುವುದರಿಂದ ಸದೃಢ ನಾಡಕಟ್ಟಲು ಸಾಧ್ಯವಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣರವರು ತಿಳಿಸಿದರು.

ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯದ ಸಾಧನೆಗಳು ಗಮನ ಸೆಳೆದಿವೆ. ನಮ್ಮ ನಾಡಿನ ಬಗ್ಗೆ ನಾವುಗಳು ಕನ್ನಡ ಭಾಷೆಯನ್ನು ಅತ್ಯಂತ ಪ್ರೀತಿಯಿಂದ ಕಾಣಬೇಕಿದೆ. ಗಡಿ ಭಾಗದಲ್ಲಿರುವ ನಾವುಗಳು ದ್ವಿಭಾಷಿಕರಾಗಿದ್ದು, ಕನ್ನಡದ ಪ್ರಬುದ್ಧತೆ ಹೆಚ್ಚಿಸುತ್ತದೆ. ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಟಿ ಜಗದೀಶ್ ಕರ್ನಾಟಕ ರಾಜ್ಯೋತ್ಸವದ ಬಗ್ಗೆ ಸಂದೇಶ ನೀಡಿದರು ಕನ್ನಡ ನಾಡಿಗೆ ದಿವ್ಯ ಪ್ರಾಚೀನ ಪರಂಪರೆ ಇದೆ. ಕಲೆ ಸಂಸ್ಕೃತಿಕ ಸಾಹಿತ್ಯ ರಾಜಕೀಯ ಇತಿಹಾಸ ಭೂಗೋಳ ಎಲ್ಲಾ ರೀತಿಯಲ್ಲೂ ವ್ಯಾಪಕವೆನಿಸಿದೆ. ಕನ್ನಡ ನಾಡನ್ನು ಕರುನಾಡು ಕರ್ನಾಟಕ ಎಂದು ಕರೆಯುತ್ತೇವೆ. ಕವಿರಾಜ ಮಾರ್ಗದಲ್ಲಿ ಹೇಳಿರುವಂತೆ ಕಾವೇರಿಯಿಂದ ಗೋದಾವರಿವರಿಗೂ ನಮ್ಮ ಕರುನಾಡು ವ್ಯಾಪಿಸುತ್ತು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿ ಓ ನಿರ್ಮಲದೇವಿ ಸ್ವಾಗತಿಸಿದರು. ಅದೇ ರೀತಿ ವಿಶೇಷ ಉಪನ್ಯಾಸವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯರಾದ ಲಿಂಗೇಶ್ವರ ವೈ ಸಂಕ್ಷಿಪ್ತವಾಗಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ಗೀತೆಗಳು ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು ಕಾರ್ಯಕ್ರಮದ ಮುನ್ನ ಭುವನೇಶ್ವರಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಸಿದ್ದಣ್ಣ, ಜಿಂಕಾ ಶ್ರೀನಿವಾಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹನುಮಂತಪ್ಪ ಎಚ್, ಪಟ್ಟಣ ಪಂಚಾಯತಿ ಪ್ರಭಾರಿ ಮುಖ್ಯ ಅಧಿಕಾರಿ ಲಿಂಗರಾಜು, ವೃತ್ತ ನಿರೀಕ್ಷಕರಾದ ನಾಗರಾಜ್ ಆರ್, ಸಬ್ ಇನ್ಸ್ಪೆಕ್ಟರ್ ಮಹೇಶ್ ಲಕ್ಷ್ಮಣ ಹೊಸಪೇಟೆ, ಡಾ ರಂಗಪ್ಪ, ಪಟ್ಟಣ ಪಂಚಾಯತಿ ಸದಸ್ಯರಾದ ಎಸ್ ಖಾದರ್, ಮುಖಂಡರುಗಳಾದ ಮುಖಂಡರುಗಳಾದ ವಿ ಮಾರ್ ನಾಯ್ಕ್,ದೇವಯ್ಯ , ಅಬ್ದುಲ್ಲ, ನಾಗಭೂಷಣ್ ನಾಗರಾಜ್ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ




