Ad imageAd image

ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಮಾಡಿದ ಶಾಸಕ ಎನ್ ವೈ ಗೋಪಾಲ ಕೃಷ್ಣ

Bharath Vaibhav
ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಮಾಡಿದ ಶಾಸಕ ಎನ್ ವೈ ಗೋಪಾಲ ಕೃಷ್ಣ
WhatsApp Group Join Now
Telegram Group Join Now

ಮೊಳಕಾಲ್ಮೂರು ತಾಲೂಕಿನಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಮಾಡಿದ ಶಾಸಕ ಎನ್ ವೈ ಗೋಪಾಲ ಕೃಷ್ಣ

ಅಮಕುಂದಿ ಹಾಗೂ ಚಿಕ್ಕೇರಹಳ್ಳಿ ಗ್ರಾಮಗಳಲ್ಲಿ ಒಟ್ಟು 84ಲಕ್ಷಗಳ ಕಾಮಗಾರಿಗಳನ್ನು ನೆರವೇರಿಸಿದ ಶಾಸಕ ಮೊಳಕಾಲ್ಮುರು ತಾಲ್ಲೂಕಿನ ಅಮಕುಂದಿ ಗ್ರಾಮದಿಂದ ಚಿಕ್ಕೇರಹಳ್ಳಿಗೆ ಹೋಗುವ ರಸ್ತೆಗೆ 70 ಲಕ್ಷಗಳ ಅನುದಾನದಲ್ಲಿ ಎರಡನೇ ಗುತ್ತಿಗೆಧಾರರಾದ ಎಂ ರಾಜೇಂದ್ರರವರು ಕಾಮಗಾರಿ ಗುತ್ತಿಗೆ ಪಡೆದಿರುತ್ತಾರೆ. ಚಿಕ್ಕೇರಹಳ್ಳಿಯಲ್ಲಿ ಶಾಲಾ ಆವರಣದಲ್ಲಿ ನಿರ್ಮಿತ ಕೇಂದ್ರ ರವರ ಸಹಯೋಗದಲ್ಲಿ 14ಲಕ್ಷ ಅನುದಾನದ ಶಾಲಾ ಕಟ್ಟಡವನ್ನು ಮೊಳಕಾಲ್ಮುರು ವಿಧಾನ ಸಭೆ ಕ್ಷೇತ್ರದ ಮಾನ್ಯ ಶಾಸಕ ಎನ್ ವೈ ಗೋಪಾಲ ಕೃಷ್ಣ ರವರು ಉದ್ಘಾಟನೆ ಮಾಡಿದರು.

ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ ಹನುಮಂತಪ್ಪ,ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲ ದೇವಿ ಪಿ ಆರ್ ಡಿ ಇಂಜಿನಿಯರ್ ಟಿ ಲಿಂಗರಾಜು, ಕಾಂಗ್ರೆಸ್ ಮುಖಂಡರು ಮತ್ತು ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್ ಖಾಧರ್, ಗುತ್ತಿಗೆದಾರ ಆಶಿಫ್, ಕಾಂಗ್ರೆಸ್ ತಾಲ್ಲೂಕ ಯೂತ್ ಅಧ್ಯಕ್ಷರು ಧನಂಜಯ, ಚಿಕ್ಕೇರಹಳ್ಳಿ ಮುಖಂಡರುಗಳಾದ ಪ್ರಕಾಶ್ ನಿವೃತ್ತ ಶಿಕ್ಷಕರು ,ವೆಂಕಟೇಶ್ ಜಗದೀಶ್ ರಾಮಾಜಿನೇಯ, ಮರಿ ಸ್ವಾಮಿ, ಮಹಾಂತೇಶ್ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ :ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!