ಮೊಳಕಾಲ್ಮುರು:-ನಾನು ಕ್ಷೇತ್ರದ ಶಾಸಕನಿದ್ದೇನೆ,ಜವಾಬ್ದಾರಿಯುತ ಸ್ಥಾನದಲ್ಲಿದ್ದು ಜನರ ಸೇವೆ ಮಾಡುತ್ತಿದ್ದೇನೆ.ಸಮಸ್ಯೆಗಳು ಆದಾಗ ನನ್ನ ಬಳಿ ಹೇಳಬೇಕು ಅದು ಬಿಟ್ಟು ಆಸ್ಪತ್ರೆ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು, ನಿಮ್ಮ ವೃತ್ತಿಗೆ ಶೋಭೆ ತರುವುದಿಲ್ಲ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಸುಧೀಂದ್ರ ಬಾಬುಗೆ ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಮೇಣದಬತ್ತಿ ಬೆಳಕಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು,ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದ ಬೆನ್ನಲ್ಲೇ ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ವೈದ್ಯರ ನಡೆ ಕುರಿತು ಕೆಂಡಮಂಡಲವಾದರು
ಸ್ವಾಮಿ ನಮಸ್ಕಾರ ಆಸ್ಪತ್ರೆಯಲ್ಲಿ ಆಗಿರೋ ಘಟನೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ.ಎಲ್ಲಾ ವರದಿಗಳು ನಿಮ್ಮ ಹೆಸರು ಹೇಳುತಿವೇ!ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವೇ ಕಾಣುತ್ತಿದ್ದೀರಾ!ಘಟನೆ ಕುರಿತಂತೆ ವಿಚಾರಣೆ ಆಗಲಿ ತಪಿತಸ್ಥರು ಯಾರು ಎಂದು ಅರ್ಥವಾಗುತ್ತೆ ಎಂದು ಶಾಸಕರು ಕಿಡಿಕಾರಿದರು.
ಸ್ಥಳದಲ್ಲಿದ್ದ ಆಸ್ಪತ್ರೆಯ ವೈದ್ಯ ಡಾ. ಸುಧೀಂದ್ರ ಬಾಬು ಮಾತನಾಡಿ ಯಾರು ವಿಡಿಯೋ ಮಾಡಿದ್ದಾರೋ ಗೊತ್ತಿಲ್ಲ!?ನನ್ನ ವೃತ್ತಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ.ವಿಡಿಯೋ ವೈರಲ್ ಆಗುತ್ತಿರುವುದು ನನಗೆ ಗೊತ್ತಿಲ್ಲ, ಶಾಸಕರ ಬಗ್ಗೆ ನನಗೆ ಅಪಾರವಾದ ಅಭಿಮಾನವಿದೆ,ಆದರೆ ನನ್ನ ಬಗ್ಗೆ ಇಂತಹ ಆಪಾದನೆ ಮಾಡಬಾರದು ಎಂದು ಶಾಸಕರ ಬಳಿ ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಶಾಸಕರ ಬೆಂಬಲಿಗರು ವೈದ್ಯರ ನಡೆಗೆ ಬೇಸರ ವ್ಯಕ್ತಪಡಿಸಿ ತರಾಟೆಗೆ ವೈದ್ಯರನ್ನು ತೆಗೆದುಕೊಂಡರು.ಮೊದಲು ಶಾಸಕರಿಗೆ ಗೌರವ ಕೊಟ್ಟು ಮಾತನಾಡಿ,ಬೆಟ್ಟು ಮಾಡಿ ಮಾತನಾಡುವುದನ್ನು ಮೊದಲು ಬಿಡಿ ಇಂತಹ ಉಡಾಫೆ ವರ್ತನೆ ಸರಿಯಲ್ಲ ಎಂದು ವೈದ್ಯರ ವಿರುದ್ಧ ಗರಂ ಆದರು.ಈ ವೇಳೆ ಶಾಸಕರ ಬೆಂಬಲಿಗರು ಮತ್ತು ವೈದ್ಯ ಡಾ. ಸುಧೀಂದ್ರ ಬಾಬು ಮಧ್ಯೆ ಕೆಲ ಸಮಯ ಪರಸ್ಪರ ಮಾತಿನ ವಾಕ್ ಸಮರ ನಡೆಯಿತು, ಶಾಸಕ ಎನ್ ವೈ ಗೋಪಾಲಕೃಷ್ಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಒಟ್ಟಿನಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಆಸ್ಪತ್ರೆಯ ವಿದ್ಯುತ್ ಸಮಸ್ಯೆ ಕುರಿತಾದ ವಿಚಾರವು ರಾಜಕೀಯದ ತಿರುವು ಪಡೆದುಕೊಂಡಿದ್ದು ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದ್ದು ವೈದ್ಯರ ನಡೆಗೆ ಶಾಸಕರು ಗರಂ ಆಗಿದ್ದಾರೆ.
ವರದಿ ಪಿಎಂ ಗಂಗಾಧರ