ಮೊಳಕಾಲ್ಮುರು: ತಾಲೂಕಿನಅತ್ಯಂತ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆದ್ಯತೆ ಮೇರೆಗೆ ದುರಸ್ತಿ ಕಾರ್ಯವನ್ನು ಕೈಗೊತ್ತಿಕೊಳ್ಳಲಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ತಿಳಿಸಿದರು. ತಾಲೂಕಿನ ಹಿರೆಕೆರೆಹಳ್ಳಿಯಲ್ಲಿ ಶುಕ್ರವಾರ ರೂ 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿ ಮಾತನಾಡಿದರು.
ಗುತ್ತಿಗೆದಾರರು ನಿಗದಿತ ಅವಧಿ ಒಳಗಾಗಿ ಗುಣಮಟ್ಟ ಕಾಮಗಾರಿ ಮಾಡಿ ಪೂರ್ಣಗೊಳಿಸಬೇಕು. ಕಳಪೆ ದೂರು ಬಂದಲ್ಲಿ ಮುಲಾಜೆಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು, ತಾಲೂಕು ಗಡಿ ಹಾಗೂ ಹಿಂದುಳಿದ ಪ್ರದೇಶವಾಗಿದ್ದು ಅಭಿವೃದ್ಧಿಗಾಗಿ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದರು.
ಇದೆ ವೇಳೆ 50 ಲಕ್ಷ ವೆಚ್ಚದಲ್ಲಿ ಉರ್ಥ ಳ್ ಗ್ರಾಮದಿಂದ ಪೆನ್ನಮ್ಮನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮತ್ತು ಚಿಕ್ಕೇರಳ್ಳಿಯಲ್ಲಿ ರೂ 30 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಿಡಿ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿ ಮಾತನಾಡಿದರು .
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇ ಓ ಹನುಮಂತಪ್ಪ ಹೆಚ್, ಜಿಲ್ಲಾ ಪಂಚಾಯತ್ ಅಭಿಯಂತರ ಲಿಂಗರಾಜ್, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಸುಭಾನ್ ಸಾಬ್, ಪಂಚಾಯತಿ ಸದಸ್ಯರು ಮತ್ತು ಗುತ್ತಿಗೆದಾರರಾದ ಎಸ್ ಖಾದರ್, ಜಗದೀಶ್ ಭರತ್ ಗ್ಯಾಸ್ ಮಾಲೀಕರಾದ ಮಹಮ್ಮದ್ ಕಾಸಿಮ್, ಹಿರೇಕರಹಳ್ಳಿ ಲಕ್ಷ್ಮಣ್, ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರು ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಪಿ.ಎಂ. ಗಂಗಾಧರ




