———————————-ವಿಶ್ವಕಾಲ ಜ್ಞಾನಿ ಶಿವಯೋಗಿ ಡಾ. ಶ್ರೀ ಶರಣ ಬಸವ ಮಹಾಸ್ವಾಮಿಗಳಿಂದ ಭವಿಷ್ಯ
ಮೊಳಕಾಲ್ಮುರು: ಬರುವ ಆರು ತಿಂಗಳ ಒಳಗಾಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಮಂತ್ರಿಯಾಗ್ತಾರೆ ಎಂದು ವಿಶ್ವ ಕಾಲಜ್ಞಾನ ಶಿವಯೋಗಿ ಡಾ. ಶ್ರೀ ಶರಣಬಸವ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

ಗಜೇಂದ್ರಗಡದ ಕೋಡಿಮಠ ತಳ್ಳಿಯಾಳ ಸಂಸ್ಥಾನದ ವಿಶ್ವಕಾಲಜ್ಞಾನ ಶಿವಯೋಗಿ ಡಾ. ಶ್ರೀ ಶರಣಬಸವ ಮಹಾಸ್ವಾಮಿಗಳು ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ 12ಗಂಟೆಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಸಚಿವ ಸ್ಥಾನದ ಕುರಿತಾಗಿ ಭವಿಷ್ಯ ನುಡಿದಿದ್ದಾರೆ.
ಸೇವಾ ಪ್ರವೃತ್ತಿ ಇರುವಂತ ಮನುಷ್ಯ ಸನ್ಮಾರ್ಗದಿಂದ ಬಂದಿದ್ದಾರೆ,ಮುಂದಿನ ಆರು ತಿಂಗಳ ಒಳಗಾಗಿ ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆ ಆಗಲಿದ್ದು ಅಂದಿನ ಸಂದರ್ಭದಲ್ಲಿ ಹಿರಿಯ ಶಾಸಕ ಎನ್ ವೈ ಗೋಪಾಲಕೃಷ್ಣ ಮಂತ್ರಿ ಆಗ್ತಾರೆ ಮೊಳಕಾಲ್ಮೂರು ಕ್ಷೇತ್ರ ಮುಂದಿನ ದಿನಗಳಲ್ಲಿ ಸುಭಿಕ್ಷ ವಾಗಲಿದೆ.ಸರಳ ಸಜ್ಜನಿಕೆಯ ವ್ಯಕ್ತಿಗಳು ಮಾತ್ರ ಇಲ್ಲಿ ಆಳ್ವಿಕೆ ನಡೆಸುತ್ತಾರೆ.ಕಾಡುವ ಪ್ರಾಣಿಗಳು ಕಾಡಿನಲ್ಲಿ ಇದ್ದರೆ ಕಾಡುವ ಪ್ರಾಣಿಗಳು ಊರಿನಲ್ಲಿದ್ದಾರೆ ಮುಂದಿನ ದಿನಗಳಲ್ಲಿ ಎಲ್ಲವು ಸರಿ ಹೋಗಲಿದೆ, ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ವಸಂತ ಗಾಳಿ ಬೀಸುತ್ತದೆ ಮುಂದಿನ ಆರು ತಿಂಗಳ ಒಳಗಾಗಿ ಖಂಡಿತ ಶಾಸಕ ಎನ್ ವೈ ಗೋಪಾಲಕೃಷ್ಣ ಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನಡೆದಿದ್ದಾರೆ.
ವರದಿ: ಪಿ.ಎಂ. ಗಂಗಾಧರ




