Ad imageAd image

ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ರಾಂಪುರದಲ್ಲಿ ಮತದಾನ ಮಾಡಿದರು

Bharath Vaibhav
ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ರಾಂಪುರದಲ್ಲಿ ಮತದಾನ ಮಾಡಿದರು
WhatsApp Group Join Now
Telegram Group Join Now

ಮೊಳಕಾಲ್ಮುರು: ಬಿಸಿಲನ್ನು ಲೆಕ್ಕಿಸದೇ ತಾಲೂಕಿನಾದ್ಯಂತ ಪ್ರತಿ ಹಳ್ಳಿಯಲ್ಲಿ ಪ್ರತಿಭೂತಗಳಲ್ಲಿ ಸಾರಥಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ರಾಂಪುರದಲ್ಲಿ ಶಾಸಕರಾದ ಎನ್ ವಿ ಗೋಪಾಲಕೃಷ್ಣರವರು ಮತದಾನ ಮಾಡಿದರು ಈ ಸಂದರ್ಭದಲ್ಲಿ ಅವರು ಮಾತನಾಡಿ ಪ್ರತಿಯೊಬ್ಬ ನಾಗರಿಕನು ಹೆಣ್ಣಾಗಲಿ ಗಂಡಾಗಲಿ ನಿಮ್ಮ ಅಕ್ಕನು ಚಲಾಯಿಸಿ ನಿಮ್ಮ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶ ಸಿಕ್ಕಿದೆ ತಪ್ಪದೆ ಮತದಾನ ಮಾಡಿ ಎಂದರು.

ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ ಮಂಜುನಾಥ್ ರವರು ಮಾತನಾಡಿ ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶ ಸಿಕ್ಕಿದೆ ದಯವಿಟ್ಟು ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಯಾವುದೇ ಕಾರಣಕ್ಕೂ ನೀವು ಮತದಾನ ಮಾಡದೆ ನಿಮ್ಮ ಹಕ್ಕನ್ನು ಕಳೆದುಕೊಳ್ಳಬೇಡಿ ಎಂದರು.

ಇದೇ ಸಂದರ್ಭದಲ್ಲಿ ಮೊಳಕಾಲ್ಮೂರು ಪಟ್ಟಣದಲ್ಲಿ ಬಿರುಸಿನ ಮತದಾನ ಮಾಡಲಾಯಿತು. ಒಟ್ಟಿನಲ್ಲಿ ಈ ಚುನಾವಣೆಯು ಕೊನೆಯ ಹಂತಕ್ಕೆ ಬಂದು ತಲುಪಿದೆ ಈ ಚುನಾವಣೆಯು ಕೆಲವರಿಗೆ ಪ್ರತಿಷ್ಠೆಯಾಗಿ ಕಂಡರೂ ಕೂಡ ಮತದಾರರೇ ಅಂತಿಮ. ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ತಾಲೂಕಿನಂತೆ ಬಿರುಸಿನ ಮತದಾನ ನಡೆಯಿತು.

ವರದಿ:  ಪಿಎಂ ಗಂಗಾಧರ್ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!