Ad imageAd image

ಅಂಬೇಡ್ಕರ್ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದ : ಶಾಸಕ ಎನ್ ವೈ ಗೋಪಾಲಕೃಷ್ಣ

Bharath Vaibhav
ಅಂಬೇಡ್ಕರ್ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದ : ಶಾಸಕ ಎನ್ ವೈ ಗೋಪಾಲಕೃಷ್ಣ
WhatsApp Group Join Now
Telegram Group Join Now

ಮೊಳಕಾಲ್ಮೂರು : ಈ ಸಮುದಾಯದ ಅದೆಷ್ಟು ದಿನಗಳ ಕನಸು ಈಗ ನನಸಾಗುತ್ತಿರುವುದು ಸಂತೋಷದ ವಿಚಾರ. ಅಂಬೇಡ್ಕರ್ ಭವನವನ್ನು ಆದಷ್ಟು ಬೇಗ ನನ್ನ ಅವಧಿಯಲ್ಲಿ ಮುಗಿಸಿ ಉದ್ಘಾಟನೆ ಮಾಡಿಕೊಡುತ್ತೇನೆ ಎಂದು ತಿಳಿಸಿದರು.

ಪಟ್ಟಣದ ಹಾನಗಲ್ ರಸ್ತೆಯ ಎರಡು ಎಕರೆ ಜಮೀನಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೆಲವರು ಇದನ್ನು ಈ ಜಾಗವನ್ನು ವಿರೋಧಿಸಿದರು. ಅದನ್ನು ಲೆಕ್ಕಿಸದೆ ಸಮಾಜಕ್ಕೆ ಏನಾದರೂ ಒಳಿತನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಆದಷ್ಟು ಬೇಗನೆ ಈ ಭೂಮಿ ಪೂಜೆ ನೆರವೇರಿಸಬೇಕಾಯಿತು ಎಂದರು. ನಾನು ಯಾವುದೇ ಉದ್ದೇಶದಿಂದ ಈ ಕೆಲಸ ಮಾಡಿಲ್ಲ ಈಗ ಯಾವುದೇ ಚುನಾವಣೆಗಳು ಬಂದಿಲ್ಲ ಕೆಲಸ ಮುಟ್ಟಿದ ಮೇಲೆ ಆಗಲೇಬೇಕು ಎನ್ನುವ ಛಲತೊಟ್ಟು ಕೆಲಸ ಮಾಡುವವನು ಎಂದರು.

ಕಳೆದ ಬಾರಿ ರೂಪ ಅವರು ತಹಸಿಲ್ದಾರರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಈ ಸಮುದಾಯದ ಅನೇಕ ಹಿರಿಯ ಮುಖಂಡರು ಎಲ್ಲರೂ ಬಂದು ನನ್ನಲ್ಲಿ ಈ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು ಆಗ ಕೂಡಲೇ ಈ ಭಾಗದಲ್ಲಿ ಯಾವುದು ಜಾಗ ಭವನ ಕಟ್ಟಲು ಯೋಗ್ಯವಿದೆ ಎಂದು ಉಡಕಲು ತಿಳಿಸಿದೆ ಕೆಲವರು ಬೇರೆ ಬೇರೆ ಕಡೆಯಿಂದ ಜಾಗ ತೋರಿಸಿದರು. ಈ ಜಾಗ ಎಲ್ಲರಿಗೂ ಅನುಕೂಲವಾಗುತ್ತದೆ ಈ ಭವನ ನಿರ್ಮಾಣ ಮಾಡಿದರೆ ಎಲ್ಲಾ ಸಮುದಾಯದವರು ಇಲ್ಲಿ ಮದುವೆ ಬೇರೆ ಬೇರೆ ಕಾರ್ಯಕ್ರಮಗಳು ಮಾಡಬಹುದು ಎಂದು ಈ ಜಾಗವನ್ನು ಗುರುತಿಸಿದೆ ಎಂದರು. ಈ ಜಾಗ ಎಲ್ಲರಿಗೂ ಸೂಕ್ತವಾಗುತ್ತದೆ ಎಂದು ನಿರ್ಧರಿಸಲಾಯಿತು ಹುಟ್ಟು ಸಾವು ಅನಿವಾರ್ಯ ಇರುವುದರೊಳಗೆ ಒಳ್ಳೆಯ ಕೆಲಸ ಮಾಡಬೇಕು ಎಂದರು. ಪಕ್ಷಾತೀತವಾಗಿ ಎಲ್ಲರೂ ಸೇರಿದ್ದೀರಾ ನನ್ನ ಕೆಲಸ ನಾನು ಮಾಡಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಡಿಎಸ್ಎಸ್ ಸಂಚಾಲಕರಾದ ನಾಗಭೂಷಣ್ ಮಾತನಾಡಿ. ತಾಲೂಕಿನಲ್ಲಿ ಅತಿ ಹೆಚ್ಚು ಸಮುದಾಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರೇ ಇದ್ದಾರೆ ನಮ್ಮ ಸಮುದಾಯದ ಅನೇಕ ವರ್ಷಗಳ ಕನಸು ನನಸಾಗುತ್ತಿರುವುದು ಸಂತೋಷದ ವಿಚಾರ ಇದಕ್ಕೆಲ್ಲಾ ನೇರ ಕಾರಣ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಎಂದರು.

ಅವರ ಇಚ್ಛಾಶಕ್ತಿಗೆ ಇದೊಂದು ಉದಾಹರಣೆ ಅವರಲ್ಲಿ ಜಾತಿ ಭೇದ ಭಾವ ಯಾವುದು ಇಲ್ಲ ಆದರಿಂದ ಅದೆಷ್ಟು ದಿನಗಳ ಕನಸು ಈಗ ನನಸಾಗುತ್ತಿದೆ ಅವರಿಗೆ ಕೋಟಿ ಕೋಟಿ ನಮನಗಳು ಶಾಸಕರಲ್ಲಿ ನನ್ನದೊಂದು ಮನವಿ ಈ ಜಾಗದಲ್ಲಿ ಭೂಮಿ ಪೂಜೆ ನೀವೇ ಮಾಡಿದ್ದೀರಾ ನಿಮ್ಮ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟನೆ ಕೂಡ ನೀವು ಮಾಡಬೇಕು ಎನ್ನುವುದು ತಾಲೂಕಿನ ಎಲ್ಲಾ ಅಂಬೇಡ್ಕರ್ ಪ್ರಜೆಗಳ ಒತ್ತಾಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಿ ಪ್ರಕಾಶ್ ಮಾತನಾಡಿ ಸೋಷಿತ ಸಮಾಜಕ್ಕೆ ಇಂತಹ ಮಹಾನ್ ಕೊಡಿಗೆ ಕೊಟ್ಟಿರುವುದು ಇದೊಂದು ಚಾರಿತ್ರಿಕ ವಿಚಾರ ಇಂತಹ ಮಹಾನ್ ಸಂಭ್ರಮಕ್ಕೆ ಸಾಕ್ಷಿಯಾಗಿ ನಾವೆಲ್ಲಾ ಇರುವುದು ನಿಮ್ಮ ನಮ್ಮೆಲ್ಲರ ಅದೃಷ್ಟ ಅಂಬೇಡ್ಕರ್ ಅವರು ಹೇಳಿದ ಹಾಗೆ ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ ಸ್ವಾತಂತ್ರ್ಯ ಆರ್ಥಿಕ ಸ್ವಾತಂತ್ರ್ಯ ಸಿಕ್ಕರೆ ಮಾತ್ರ ಆ ಸಮುದಾಯ ಮುಂದೆ ಬರುತ್ತದೆ ಈಗಿರುವ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥವಿಲ್ಲ ಅಂಬೇಡ್ಕರ್ ಅವರನ್ನು ನಾವು ಅವರ ನಡೆ ನುಡಿಗಳನ್ನು ಪಾಲಿಸಬೇಕು ಈ ಕ್ಷೇತ್ರದಲ್ಲಿ ಅತಿ ದೊಡ್ಡ ಅಂಬೇಡ್ಕರ್ ಕುಟುಂಬ ಯಾವುದಾದರೂ ಇದ್ದರೆ ಅದು ಎನ್ ವೈ ಜಿ ಕುಟುಂಬ ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಯಣ, ಕರಿಬಸಪ್ಪ, ಶ್ರೀನಿವಾಸ್ ಮೂರ್ತಿ ಅಂಬೇಡ್ಕರ್ ಭವನದ ಕುರಿತು ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮುರಾರ್ಜಿ, ಅರ್ಜನಳ್ಳಿ ನಾಗರಾಜ್, ಪರಮೇಶಪ್ಪ, ಚಂದ್ರು, ಮರಿಸ್ವಾಮಿ ನಾಗರಾಜ್ ನಾಗೇಂದ್ರಪ್ಪ ಬಸಣ್ಣ ವಿವಿಧ ಇಲಾಖೆಯಿಂದ ಬಂದ ಅಧಿಕಾರಿಗಳು ಅಂಬೇಡ್ಕರ್ ಅಭಿಮಾನಿಗಳು ಇನ್ನು ಹಲವು ಪ್ರಸ್ಥಿತರಿದ್ದರು.

ವರದಿ : ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!