Ad imageAd image

ಶಾಸಕ ಪ್ರಭು ಚವ್ಹಾಣ ಜನ್ಮದಿನ : ವಿಷ್ಣುಪ್ರೀಯ ಗೋಶಾಲೆಯಲ್ಲಿ ಅಭಿಮಾನಿಗಳಿಂದ ಗೋಪೂಜೆ

Bharath Vaibhav
ಶಾಸಕ ಪ್ರಭು ಚವ್ಹಾಣ ಜನ್ಮದಿನ : ವಿಷ್ಣುಪ್ರೀಯ ಗೋಶಾಲೆಯಲ್ಲಿ ಅಭಿಮಾನಿಗಳಿಂದ ಗೋಪೂಜೆ
WhatsApp Group Join Now
Telegram Group Join Now

—————————————————-ಧಿರ್ಘಾಯುಶ್ಯಕ್ಕಾಗಿ ಪ್ರಾರ್ಥನೆ : ವಿಜಯಕುಮಾರ ಪಾಟೀಲ ಗಾದಗಿ

ಬೀದರ : ಔರಾದ (ಬಾ) ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರ 56ನೇ ಜನ್ಮದಿನದ ಪ್ರಯುಕ್ತ ಬೀದರ ನಗರದ ಶ್ರೀ ನರಸಿಂಹ ಝರಣಾ ದೇವಸ್ಥಾನದ ಬಳಿಯ ವಿಷ್ಣುಪ್ರೀಯಾ ಗೋಶಾಲೆಯಲ್ಲಿ ವಿಜಯಕುಮಾರ ಪಾಟೀಲ ಗಾದಗಿ, ಗುರುನಾಥ ರಾಜಗೀರಾ ಹಾಗೂ ಅಭಿಮಾನಿಗಳಿಂದ ಗೋಪೂಜೆಗೈದು ನೈವೇದ್ಯ ಸಮರ್ಪಿಸಿ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲಾಯಿತು.

ಗೋ ಪೂಜೆ ಕೇವಲ ಪೂಜೆಯಲ್ಲ, ಬದಲಾಗಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಒಂದು ಸಂಪ್ರದಾಯವಾಗಿದೆ, ಗೋವು ಸಮೃದ್ಧಿ ಮತ್ತು ಸಂಪತ್ತನ್ನು ಪ್ರತಿನಿಧಿಸುತ್ತದೆ ಎಂದು ಬಿಜೆಪಿ ಜಿಲ್ಲಾ ಉಪಾದ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ಹೇಳಿದರು.

ಪಶುಸಂಗೋಪನೆ ಇಲಾಖೆ ಸಚಿವರಾಗಿದ್ದಾಗ ಗೋಹತ್ಯಾ ನೀಷೇಧ ಕಾನೂನು ಜಾರಿಗೆ ತರುವುದರ ಜೊತೆಗೆ ಗೋಮಾತೆ ಸೇರಿದಂತೆ ಅನೇಕ ಮೂಕ ಪ್ರಾಣಿಗಳ ರಕ್ಷಣೆಗೆ ಉಚಿತ ಆ್ಯಂಬುಲೇನ್ಸ್ ಸೇವೆ ನೀಡಿರುವುದು ಸ್ಮರಣಿಯವಾಗಿದೆ ಎಂದರು.

ಬಿಜೆಪಿ ಜಿಲ್ಲಾ ಸಹ ವಕ್ತಾರ ಗುರುನಾಥ ರಾಜಗೀರಾ ಮಾತನಾಡಿ ಸಾಮಾನ್ಯ ಕುಟುಂಬದಿಂದ ಬಂದು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಔರಾದ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಪಶುಸಂಗೋಪನೆ ಇಲಾಖೆ ಸಚಿವರಾಗಿ ಅನೇಕ ದಾಖಲಾರ್ಹ ಕೆಲಸಗಳನ್ನು ಪ್ರಭು ಚವ್ಹಾಣ ಅವರು ಮಾಡಿದ್ದಾರೆ, ಪಕ್ಷದ ಕಾರ್ಯ ಚಟುವಟಿಕೆಗಳ ಜೊತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಕ, ಹಬ್ಬ ಹರಿದಿನಗಳ ವಿಶೇಷ ಆಚರಣೆ ಮಾಡುವುದರ ಮೂಲಕ ಸದಾ ಜನರ ಮಧ್ಯದಲ್ಲಿರುವ ಪ್ರಭು ಚವ್ಹಾಣ ಅವರ ಸೇವೆ ಸ್ಮರಣೀಯ ಮತ್ತು ಅನುಕರಣೀಯವಾಗಿದೆ ಎಂದರು.

ಬಿಜೆಪಿ ಮುಖಂಡ ನಾಗರಾಜ ಕರ್ಪೂರ ಮಾತನಾಡಿ ರಾಜಕೀಯ ಕ್ಷೇತ್ರದಲ್ಲಿದ್ದಾಗ ಹಲವಾರು ಸವಾಲುಗಳು ಎದುರಾಗುತ್ತವೆ ಆ ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕಾಗುತ್ತದೆ ಅದಕ್ಕೆ ನೈಜ ಸಾಕ್ಷಿ ಶಾಸಕ ಪ್ರಭು ಚವ್ಹಾಣ ಅವರು ಎಂಥದ್ದೆ ಸಮಸ್ಯೆ ಬಂದರು ಎದೆಗುಂದದೆ ಎದುರಿಸಿ ಮುನ್ನುಗ್ಗುತ್ತಾರೆ ಈ ನಿಟ್ಟಿನಲ್ಲಿ ದೇವರು ಅವರಿಗೆ ಇನ್ನಷ್ಟು ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಗೋಶಾಲೆಯ ಮುಖ್ಯಸ್ಥ ಸಾಗರ ಪಾಠಕ್, ಐ.ಎನ್.ಓ ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ ಪ್ರಮುಖರಾದ ಸುನೀಲ ಗೌಳಿ, ವೀರು ದಿಗ್ವಾಲ್, ಪುಷ್ಪಕ ಜಾಧವ, ಕಿರಣ ಮೂರ್ತಿ, ವಿನೋದ ಪಾಟೀಲ, ಆನಂದ ರೆಡ್ಡಿ, ಅನೀಲ ಪಡಮಟ್ಟಿ ಸೇರಿದಂತೆ ಇತರರಿದ್ದರು.

ವರದಿ: ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!