ಐನಾಪುರ ವರದಿ: ರಾಜ್ಯ ಸರಕಾರದ ಕಂದಾಯ ಇಲಾಖೆಯ ರಾಜ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಇವರು ಶಾಸಕರನ್ನು ಅವಮಾನಿ ಸಿದ್ದು, ಅಧಿವೇಶನದಲ್ಲಿ ಅವರ ಬಗ್ಗೆ ಹಕ್ಕುಚ್ಯುತಿ ಮಂಡಿಸಲಾ ಗುವುದು ಎಂದು ಶಾಸಕ ರಾಜು ಕಾಗೆ ನುಡಿದರು.
ಶನಿವಾರ ಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನು ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಇವರು ಕಂದಾಯ ಇಲಾಖೆ ನೌಕರರ ಪ್ರತಿಭಟನೆ ಸಂದರ್ಭದಲ್ಲಿ ರಾಜೇಂದ್ರ ಕಟಾರಿಯಾ ಇವರೊಂದಿಗೆ ಗ್ರಾಮ ಲೆಕ್ಕಾ ಧಿಕಾರಿಗಳ ಬೇಡಿಕೆಗಳ ಬಗ್ಗೆ ಚರ್ಚಿಸಿ, ಒಳ್ಳೆಯ ನಿರ್ಣಯ ಕೈಗೊಳ್ಳಿರಿ ಎಂದು ಹೇಳಿದಾಗ, ಅವರಿಗೆ ಕೆಲಸವಿಲ್ಲ. ಅವರು ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಅಷ್ಟೇನುಕೇಳಿಕೊಳ್ಳುವ ಅವಶ್ಯಕತೆಯಿಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದರು. ಇದನ್ನು ಕೇಳಿದಾಗ ನನಗೂ ಒಂದು ಕ್ಷಣ ಆಶ್ಚರ್ಯವಾಯಿತು ಎಂದರು.
ಕಾಗವಾಡದಲ್ಲಿ 8.60 ಕೋಟಿ ರೂ.ವೆಚ್ಚಮಾಡಿ ಪ್ರಜಾಸೌಧ ಕಟ್ಟಡ ಕಟ್ಟಲು ಸ್ಥಳ ನಿಶ್ಚಿತಗೊಳಿಸಲಾಗಿದೆ.ಮಾರ್ಚ್ ತಿಂಗಳಿನಲ್ಲಿ ಇದರ ಭೂಮಿಪೂಜೆ ನಡೆಯಬೇಕಾಗಿದೆ.ಆದರೆ ಹೀಗೆ ತರಾತುರಿಯಲ್ಲಿ ಆಗುವುದಿಲ್ಲವೆಂದು ಹೇಳಿ ಅವಮಾನಿಸಿದ್ದಾರೆ. ನಾನು ಈ ಅಧಿವೇಶನದಲ್ಲಿ ಅವರ ವಿರುದ್ದ ಹಕ್ಕುಚ್ಯುತಿ ಮಂಡನೆ ಮಾಡುವ ನಿರ್ಣಯ
ಕೈಗೊಂಡಿದ್ದೇನೆ ಎಂದರು. ಸಚಿವರು,ಹಿರಿಯ ಅಧಿಕಾರಿಗಳು ಇಂತಹ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸದೇ ಹೋದರೆ ನಾವೆಲ್ಲ ಶಾಸಕರು ಬೇರೆಯೇ ನಿರ್ಣಯ
ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವರದಿ: ಮುರಗೇಶ ಗಸ್ತಿ .ಬಿವಿ ನ್ಯೂ ಸ್ ಐನಾಪುರ