Ad imageAd image

ರೈತರ ಪರ ಕೆಲಸ ಮಾಡಿದರೆ ರಾಜ್ಯ ಸಮೃದ್ದಿಯಾಗುತ್ತದೆ : ಶಾಸಕ ರಮೇಶ ಜಾರಕಿಹೋಳಿ

Bharath Vaibhav
ರೈತರ ಪರ ಕೆಲಸ ಮಾಡಿದರೆ ರಾಜ್ಯ ಸಮೃದ್ದಿಯಾಗುತ್ತದೆ : ಶಾಸಕ ರಮೇಶ ಜಾರಕಿಹೋಳಿ
WhatsApp Group Join Now
Telegram Group Join Now
 ಗೋಕಾಕ : ನಾಲ್ಕು ಸೈಕಲ್ ಮತ್ತು ಮನೆಗಳನ್ನು  ಕೊಡುವದಕ್ಕಿಂತ ಕೇವಲ ಭಾಷಣ ಮಾಡದೆ ನಿಜವಾಗಿ ರೈತರ ಪರ ಕೆಲಸ ಮಾಡಿದರೆ, ರೈತರು ಶಾಂತವಾಗುತ್ತಾರೆ ನಂತರ ಹಂತ ಹಂತವಾಗಿ ರಾಜ್ಯ ದೇಶ ಸಮೃದ್ದಿಯಾಗುತ್ತದೆ ಎಂದು  ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಇವರು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು.
 ಗೋಕಾಕ ತಾಲೂಕಿನ ಕೊಣ್ಣೂರ ಪಟ್ಣದ ಹೊರವಲಯದ ಕೊಣ್ಣೂರ ಸಾವಳಗಿ ಮುಖ್ಯ ರಸ್ತೆಯಿಂದ ಶ್ರೀ ಕಂಠಿ ಲಕ್ಷ್ಮೀದೇವಿ ದೇವಸ್ಥಾನದ ವರೆಗೆ ರೈತರಿಗೆ ಅನೂಕೂಲ ಆಗಲೆಂದು ಅಂದಾಜು ಒಂದು ಕೋಟಿ ರೂ ವೆಚ್ಚದ  ರಸ್ತೆ ಅಬಿವೃದ್ದಿ ಕಾಮಗಾರಿಗೆ  ಶಾಸಕ ರಮೇಶ ಜಾರಕಿಹೋಳಿ ಇವರು ಭೂಮಿ ಪೂಜೆ ನೇರವೆರಿಸಿದರು.
ಸ್ಥಳಿಯ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಸರಕಾರವನ್ನು ಟೀಕೆ ಮಾಡುದಕ್ಕಿಂತ ಸಾದ್ಯವಾದಷ್ಟ  ಅಬಿವೃದ್ದಿ ಕಾರ್ಯಗಳನ್ನು ಮಾಡಬೇಕು , ಟೀಕೆ ಮಾಡುತ್ತಾ ಕುತರೆ ಆಗೊದಿಲ್ಲ.
ಸರಕಾರದ ಒಂದೊಂದು ಪದ್ದತಿ ಇರುತ್ತದೆ, ನಾನು  ನೀರಾವರಿ ಮಂತ್ರಿ ಇದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ವಿಶೇಷವಾಗಿ ಚಿಕ್ಕೋಡಿಯಲ್ಲಿ ಮತ್ತು ನಮ್ಮ ಬಾಗದಲ್ಲಿ ಸವಳು ಜವಳು ತೆಗೆದು ರೈತರಿಗೆ ಅನೂಕೂಲಕ್ಕಾಗಿ ರಸ್ತೆ ಅಬಿವೃದ್ದಿಗಾಗಿ 200 ಕೋಟಿ ರೂ ಇಟ್ಟು ಹೊಸ ಯೋಜನೆ ಮಾಡಲಾಗಿತ್ತು ,ನನ್ನ ರಾಜಿನಾಮೆಯಿಂದ ಅದು ಇವತ್ತು ಕುಂಟಿತವಾಗಿದೆ ,
ದೇವರ ಆಶಿರ್ವಾದ ಮತ್ತು ಜನತೆ ಆಶಿರ್ವಾದೊಂದಿಗೆ ಮತ್ತೆ ಅದೆ ಸ್ಥಾನಕ್ಕೆ ಬಂದರೆ ರಾಜ್ಯದ ಮೂಲೆ ಮೂಲೆಗಳಲ್ಲಿ ಅಬಿವೃದ್ದಿ ಕಾರ್ಯ ಮಾಡುತ್ತೇನೆ. ಮನುಷ್ಯ ತಪ್ಪು ಮಾಡುವುದು ಸಹಜ ತಿದ್ದಿಕೊಂಡು ಒಗ್ಗಟ್ಟಾಗಿ ಇದ್ದು ಮತ್ತೆ ನನಗೆ ಆಶಿರ್ವದಿಸಿದರೆ ಇನ್ನು ಹೆಚ್ಚಿನ ಅಬಿವೃದ್ದಿ ಕಾರ್ಯಮಾಡುತ್ತೇನೆಂದರು..
ಇದೆ ಸಂದರ್ಭದಲ್ಲಿ ನಾಳೆಯಿಂದ ರಾಜ್ಯಾದ್ಯಂತ ನಡೆಯುವ ಎಸ್,ಎಸ್,ಎಲ್,ಸಿ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ದೈರ್ಯದಿಂದ ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆಯಬೇಕೆಂದು ತಿಳಿಸಿ ಎಲ್ಲ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದರು.
ಇವತ್ತಿನ ಕಾರ್ಯಕ್ರಮದಲ್ಲಿ ಶಿವಾನಂದ ಗಣಾಚಾರಿ, ಸಚಿನ ಸಮಯ,ಜಿನ್ನಪ್ಪ ಚೌಗಲಾ, ಮಹಾವೀರ ಪಾಟೀಲ,ಈರಪ್ಪಾ ಪಟಗುಂದಿ ,ನಾಗಪ್ಪ ಮಾಳಗಿ, ಅಕ್ಷಯ ಬೆಡಕಿಹಾಳ, ಬಸವರಾಜ ಬೇಡರಟ್ಟಿ, ಶಂಕರ ಗಾಡಿವಡ್ಡರ.
ಗುತ್ತಿಗೆದಾರ ದರ್ಶನ ಅಶೋಕ ಕೋಳಿ, ಸೇರಿದಂತೆ ಕೊಣ್ಣೂರ ರೈತ ಸಂಘದ ಸರ್ವ ಸದಸ್ಯರು, ಕೊಣ್ಣೂರ ,ಸಾವಳಗಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಮನೋಹರ ಮೇಗೇರಿ
WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!