ಬೆಂಗಳೂರು : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಮುನಿರಾಜು, ತಮ್ಮ ಮಕ್ಕಳ ಸಾಧನೆ ನೋಡುವುದೇ ಪೋಷಕರಿಗೆ ಹೆಮ್ಮೆ. ಈಗ ಭವಿಷ್ಯ ರೂಪಿಸಿಕೊಳ್ಳುವ ಆಯ್ಕೆ ನಿಮ್ಮದು. ಜನರ ಸೇವೆ ಮಾಡುವ ಹಾದಿಯನ್ನು ನೀವು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರ. ನಿಮ್ಮ ಅನುಭವ ಜೀವನಪೂರ್ತಿ ನಿಮ್ಮ ಜೊತೆಯಲ್ಲಿರುತ್ತೆ. ನಿಮ್ಮ ಸಾಧನೆ ದೇಶವನ್ನು ಕಟ್ಟಲು ಉಪಯೋಗವಾಗಲಿ ಕಲಿಸಿದ ಗುರುಗಳು ಮತ್ತು ತಂದೆ ತಾಯಿಯನ್ನು ಯಾವತ್ತು ಮರೆಯಬಾರದು.
ಎಂದು ಅವರು ಚಿಕ್ಕಬಾಣಾವಾರದ ಆರ್.ಆರ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗ್ರ್ಯಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಹಾರೈಸಿದರು.
ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಮಾತನಾಡಿ ಭಾರತ ದೇಶ ವಿಶ್ವದಲ್ಲಿ ಬಲಿಷ್ಠ ರಾಷ್ಟ್ರವಾಗಬೇಕು ಎಂಬುದು ಎಲ್ಲರ ಕನಸು. ಆ ರೀತಿ ಬಲಿಷ್ಠವಾಗಬೇಕಾದರೆ ಯುವಕರು ಸತ್ಪ್ರಜೆಗಳಾಗಿ ದೇಶದ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು.
ಕಾಲೇಜಿನ ಟಾಪರ್ಸ್ಗಳಿಗೆ ಪದಕಗಳನ್ನು ವಿತರಿಸಲಾಯಿತು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಆರ್.ಆರ್ ಕಾಲೇಜಿನ ಸಂಸ್ಥಾಪಕ ವೈ ರಾಜಾರೆಡ್ಡಿ, ಕಾರ್ಯದರ್ಶಿ ಎಚ್.ಆರ್. ಕಿರಣ್ ನಿರ್ದೇಶಕ ಎಚ್.ಆರ್ ಅರುಣ್, ಸಿದ್ಧಾರ್ಥ್, ಸುಪ್ರತಾ, ಆಡಳಿತ ಮಂಡಳಿ, ಪ್ರಾಂಶುಪಾಲರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ವರದಿ : ಅಯ್ಯಣ್ಣ ಮಾಸ್ಟರ್




