ಹೆಗ್ಗನಹಳ್ಳಿಯ ನಿಸರ್ಗ ಶಾಲಾ ಆವರಣದಲ್ಲಿ ದೈಹಿಕ ಶಿಕ್ಷಕರ ಕಬಡ್ಡಿ ಕ್ರೀಡಾ ಕೂಟ ಉದ್ಘಾಟಿಸಿ – ಶಾಸಕ ಎಸ್ ಮುನಿರಾಜು

Bharath Vaibhav
ಹೆಗ್ಗನಹಳ್ಳಿಯ ನಿಸರ್ಗ ಶಾಲಾ ಆವರಣದಲ್ಲಿ ದೈಹಿಕ ಶಿಕ್ಷಕರ ಕಬಡ್ಡಿ ಕ್ರೀಡಾ ಕೂಟ ಉದ್ಘಾಟಿಸಿ – ಶಾಸಕ ಎಸ್ ಮುನಿರಾಜು
WhatsApp Group Join Now
Telegram Group Join Now

ಬೆಂಗಳೂರು : ಕಬಡ್ಡಿ ಆಟವು ಇತಿಹಾಸ ಆಟ ನಾಲ್ಕು ಸಾವಿರ ವರ್ಷಗಳ ಹಿಂದೆ ಕಬ್ಬಡಿ ಭಾರತದ ದಕ್ಷಿಣ ಭಾಗದಲ್ಲಿ ತಮಿಳುನಾಡಿನಲ್ಲಿ ಹೊರ ಹೊಮ್ಮಿತು ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.

ಅವರು ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ವತಿಯಿಂದ ‘ಹೊನಲು ಬೆಳಕಿನ ದೈಹಿಕ ಶಿಕ್ಷಕರ ಕಬಡ್ಡಿ ಕ್ರೀಡಾ ಕೂಟ’ ಹೆಗ್ಗನಹಳ್ಳಿ ನಿಸರ್ಗ ಶಾಲಾ ಆವರಣದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಹಯೋಗದೊಂದಿಗೆ ಆಯೋಜಿಸಲಾಗಿದ ಕ್ರೀಡಾ ಕೂಟಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ವೇದ ಕಾಲದಲ್ಲಿ ಜನರು ತಮ್ಮ ಶಕ್ತಿ ಪ್ರದರ್ಶೀಸಲು ಆಡುವ ಆಟ ವಾಗಿತ್ತು ಕಬಡ್ಡಿ ಆಟ ಎಷ್ಟೂ ರೋಮಾಂಚನಕಾರಿ ಮಾಂತ್ರಿಕ ಮತ್ತು ಆಕರ್ಷಕವಾಗಿದೆ ಆಟಗಾರು ನಿಷ್ಠೆ ಪ್ರಾಮಾಣಿಕತೆ ಪ್ರೀತಿ ವಿಶ್ವಾಸ ಮನೋಭಾವದಿಂದ ಆಟ ಆಡಿ ನಮ್ಮ ಕ್ಷೇತ್ರಕ್ಕೆ ಮತ್ತು ನಿಸರ್ಗ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಬಂದಿದ ವಿವಿಧ ಸಂಸ್ಥೆಗಳ ಪ್ರಮುಖರಿಗೆ ದೈಹಿಕ ಶಿಕ್ಷಣ ಇಲಾಖೆದವರಿಗೆ ಕ್ರೀಡಾ ಪಟುಗಳಿಗೆ ಶುಭ ಕೋರಿ ಶಾಸಕ ಎಸ್ ಮುನಿರಾಜು ಮಾತಾಡಿದರು.

ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಗಂಗಾಧರ್ ಮಾತನಾಡಿ ನಮ್ಮ ಕಬಡ್ಡಿ ತಂಡಗಳಾದ ಹೆಗ್ಗನಹಳ್ಳಿ ಡೈನಾಮಿಕ್ ವಾರಿಯರ್ಸ್,ಸಾಯಿಸ್ಟೈಕರಸ್, ಸಾಯಿ ಕಬಡ್ಡಿ ವಾರಿಯರ್ಸ್ ಪ್ರಥಮ ಸ್ಥಾನ ಪಡೆದರೆ ಲಗ್ಗೆರೆ ಸೂಪರ್ ಜಾಯಿಂಟ್ಸ್ ತಂಡಕ್ಕೆ ದ್ವಿತೀಯ ಸ್ಥಾನ ಪಡೆಯಿತು.ಆದರೆ ಗೆಲುವು ಮುಖ್ಯವಲ್ಲ ಪಂದ್ಯಾಟಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ಮಾಜಿ ಪಾಲಿಕೆ ಸದಸ್ಯ ಎಚ್ ಎನ್ ಗಂಗಾಧರ್ ಸ್ವಾಗತ ಕೋರಿ ಕ್ರೀಡಾ ಪಟುಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಪನಿರ್ದೇಶಕ ಕೆ.ಜಿ ಅಂಜನಪ್ಪ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಕೆ ತಾರಾನಾಥ್, ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಸಿ ಬಿ ಅಶೋಕ್, ಹೆಗ್ಗನಹಳ್ಳಿ ಸಿಆರ್ ಪಿ ಕುಮಾರ್, ಎಸ್.ವಿ.ಎಸ್ ಸಂಸ್ಥೆಯ ಅಧ್ಯಕ್ಷ ಅರ್ಕೇಶ್ ,ಎಂ.ಇ.ಎಸ್ ಸಂಸ್ಥೆಯ ಅಧ್ಯಕ್ಷ ಜೆ.ಎಂ ದೇಶಯ, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ದಯಾನಂದ್, ಬೆಟ್ಟ ಸ್ವಾಮಿ, ಗಿರೀಶ್ ಗೌಡ್ರು, ರಾಮಲಿಂಗೇಗೌಡ್ರು, ಶಿವಲಿಂಗೇಗೌಡ್ರು, ಯಶವಂತ, ಶಶಿಧರ್, ಕೀರ್ತಿವರ್ಮ ರಾಜು, ಶ್ರೀನಿವಾಸ್ ರಾಜು, ಜಗದೀಶ್, ರಾಜಶೇಖರ್, ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮುನಿಸ್ವಾಮಿ,ಸ್ಥಳಿಯ ಮುಖಂಡರಾದ ಡಾ. ನಾಗೇಶ್ ಕುಮಾರ್, ಗೋಪಾಲ, ಅರುಣ್ ಬೈಲಪ್ಪ, ವೆಂಕಟೇಶ್, ದೈಹಿಕ ಶಿಕ್ಷಕರಾದ ರಮೇಶ್, ಚಂದ್ರು, ಸೇರಿದಂತೆ ಮುಂತಾದವರು ಇದ್ದರು.

ವರದಿ : ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!