ಪೀಣ್ಯ,ದಾಸರಹಳ್ಳಿ: –ಏಷ್ಯಾದ ಅತಿ ಸಣ್ಣ ವಸ್ತುವಿನಿಂದ ಏರೋಸ್ಪೇಸ್ ನ ಉತ್ಪನ್ನ ದ ವರೆಗೆ ತಯಾರಿಸುವಷ್ಟು ವ್ಯವಸ್ಥೆ ಇದೆ. ತಯಾರಿಕೆಯಾದ ವಸ್ತುಗಳಿಗೆ ಇಂತಹ ಎಕ್ಸ್ಪೋ ಸಹಕಾರಿಯಾಗಲಿದೆ. ದೇಶದ ಜವಾಬ್ದಾರಿ ಹೊತ್ತಿರುವ ಮೋದಿಯವರ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಕೋವಿಡ್ ನಂತಹ ಸಮಯದಲ್ಲಿ ಕಡಿಮೆ ಸಮಯದಲ್ಲಿ ವಿಶ್ವಕ್ಕೆ ವ್ಯಾಕ್ಸಿನ್ ತಯಾರಿಸಿಕೊಟ್ಟ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ’, ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.
ಪೀಣ್ಯ ಕೈಗಾರಿಕಾ ಪ್ರದೇಶದ ಎನ್.ಟಿ.ಟಿ.ಎಫ್ ನಲ್ಲಿ ಪೀಣ್ಯ ಕೈಗಾರಿಕಾ ಸಂಘದ ವತಿಯಿಂದ ಎನ್.ಟಿ.ಟಿಎಫ್ ಹಾಗೂ ಸಿಡ್ಬಿ ಸಹಕಾರದೊಂದಿಗೆ ಆಯೋಜಿಸಿದ್ದ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಮತ್ತು ತಂತ್ರಜ್ಞಾನ ಪ್ರದರ್ಶನ ಪಿಐಎ ಎಕ್ಸ್ಪೋ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಎಸ್ ಮುನಿರಾಜು ಮಾತನಾಡಿದರು.
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಎಚ್.ಎಂ ಆರೀಫ್ ಸರ್ವರಿಗೂ ಸ್ವಾಗತ ಕೋರಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.
ನಂತರ ಮಾತನಾಡಿದ ಕೆಎಸ್ಎಸ್ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಅಧಿಕಾರಿ ಟಿ.ಹೆಚ್.ಎಂ ಕುಮಾರ್, ‘ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಕೆಎಸ್ಎಸ್ಐಡಿಸಿ ವತಿಯಿಂದ ಪಿಐಎ ಮಾನೀಟರಿಂಗ್ ನೊಂದಿಗೆ ಗುಣಮಟ್ಟದ ಕೆಲಸ ಆಗುತ್ತಿದೆ. ಹಾಗೆಯೇ ಇಂತಹ ಪ್ರದರ್ಶನ ಕಾರ್ಯಕ್ರಮ ನಡೆಸುವುದರಿಂದ ಎಂಎಸ್ಎಂಇ ಗಳ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದರು.
ಕಾಸಿಯಾ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಮಾತನಾಡಿ, ‘ಬೃಹತ್ ಕೈಗಾರಿಕೆಗಳ ಮಧ್ಯೆ ಸಣ್ಣ ಕೈಗಾರಿಕೆಗಳಿಗೆ ಸರ್ಕಾರ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಆದ್ದರಿಂದ ಸಣ್ಣ ಕೈಗಾರಿಕೆಗಳಿಗೆ ಪಾಲಿಸಿ ನೀತಿ ಜಾರಿಯಾಗಬೇಕು ಇಲ್ಲದಿದ್ದಲ್ಲಿ ಬೃಹತ್ ಹೋರಾಟ ಮಾಡಿಯಾದರೂ ಅದನ್ನು ಸಾಧಿಸುತ್ತೇವೆ’, ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್.ಟಿ.ಟಿ.ಎಫ್ ವ್ಯವಸ್ಥಾಪಕ ನಿರ್ದೇಶಕ ಆರ್ ರಾಜಗೋಪಾಲನ್, ಕೆನ್ನಾಮೆಟಲ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರನ್, ಕಾಸಿಯಾದ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ, ಪೀಣ್ಯ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಎಚ್ ಮಂಜುನಾಥ್,ಅಧ್ಯಕ್ಷ ಆರ್ ಶಿವಕುಮಾರ್, ಉಪಾಧ್ಯಕ್ಷ ಧರ್ಮಪ್ಪ, ಕಾರ್ಯದರ್ಶಿ ಸತ್ಯನಾರಾಯಣ,ಜಂಟಿ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಬಿ.ಸಿ ಚೆನ್ನಕೇಶವ,ಜಂಟಿ ಖಜಾಂಚಿ ಎಂ ಪಿ ಸೇಲ್ವಕುಮಾರ್, ಮಾಜಿ ಜಂಟಿ ಖಜಾಂಚಿ ಆರ್.ಕುಮಾರ್,ಜಿಮ್ ಖಾನ ಅಧ್ಯಕ್ಷ ರಾಜಗೋಪಾಲ್, ಮಲ್ಲೇಶ್ ಗೌಡ್ರು, ಸೇರಿದಂತೆ ವಿವಿಧ ಕಂಪನಿಯ ಮುಖ್ಯಸ್ಥರು ಮುಂತಾದವರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ