ಬೆಂಗಳೂರು: ಪೀಣ್ಯ,ದಾಸರಹಳ್ಳಿ ಈಗಿನ ಪೀಳಿಗೆಗೆ ಭಾರತೀಯ ಸಂಸ್ಕೃತಿ ಸಂಪ್ರದಾಯ ಪರಂಪರೆಯನ್ನು ಮರೆಮಾಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗವ ಕಾಲಘಟ್ಟದಲ್ಲಿ ನಾವು ಇದ್ದಿವೇನ್ನು ಎಂಬ ಅನುಮಾನ ಬರುತ್ತಿದೆ ಎಕೆಂದರೆ ಮಕ್ಕಳು ಮೋಬೈಲ್ದಲ್ಲಿ ಎಲ್ಲವನ್ನು ಸಿಗುತ್ತದೆ ಆದರೆ ಇತಿಹಾಸದ ಪರಂಪರೆ ಬಗ್ಗೆ ಮಕ್ಕಳು ಆಸಕ್ತಿ ತೋರುತ್ತಿಲ್ಲ ಅದಕ್ಕಾಗಿ ಕೆಂಪೆಗೌಡರ ಜಯಂತಿ, ಗಣೇಶ ಹಬ್ಬ, ಊರಹಬ್ಬ ಆಚರಿಸುವ ಮೂಲಕ ಮಕ್ಕಳಿಗೆ ತಿಳುವಳಿಕೆ ನೀಡಿದಂತಾಗುತ್ತದೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರು ಹೇಳಿದರು.
ಅವರು ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಚೆನ್ನಕೇಶವ, ಅಧ್ಯಕ್ಷ ನರಸಿಂಹಮೂರ್ತಿ ಎಂ.ಎನ್(ಮಂಗಳ ವಾಟರ್), ಕಾರ್ಯದರ್ಶಿ ನಾಗರಾಜಪ್ಪ, ಉಪಾಧ್ಯಕ್ಷ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಜಂಟಿ ಕಾರ್ಯದರ್ಶಿ ಶಾಂತರಾಜು,ಸಹ ಕಾರ್ಯದರ್ಶಿ ಸತ್ಯನಾರಾಯಣ್, ಕಾರ್ಯದರ್ಶಿ ಅಶೋಕ್ ಬಾಬು, ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಗೌಡ, ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜು,ವಿಠಲ್ ಬಿರಾದಾರ್, ಖಜಾಂಚಿಗಳಾದ ಶ್ರೀನಿವಾಸ್, ಮಂಜುನಾಥ್ ಗೌಡ, ಕಾನೂನು ಸಲಹೆಗಾರ ಮಹಾದೇವಯ್ಯ, ಸಂಚಾಲಕರಾದ ಚಂದ್ರಶೇಖರ್,ರುದ್ರಯ್ಯ, ಮಧುಕರ್, ಕುಮಾರ್,ಕಾಳಪ್ಪ, ಜನಾರ್ದನ್, ರಾಮೇಗೌಡ, ಶಿವಕುಮಾರ್, ಲಕ್ಷ್ಮಿದೇವಿ ಸೇರಿದಂತೆ ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಗೌರಿ ಗಣೇಶೋತ್ಸವ ನಿಮಿತ್ತ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಶಾಸ್ತ್ರೋಕ್ತವಾಗಿ ಪೂಜಾ ಪುನಸ್ಕಾರ ಮಹಾಮಂಗಳಾರತಿ ತೀರ್ಥ ಪ್ರಸಾದ ಮತ್ತು ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರು ಆಗಮಿಸಿ ಗಣೇಶನ ದರ್ಶನ ಪಡೆದರು ನಂತರ ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ನರಸಿಂಹಮೂರ್ತಿ ಮಂಗಳ ವಾಟರ್ ಅವರ ಸ್ನೇಹಿತರು ಸೇರಿ ವಿಷೇಶವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಜೊತೆಗೆ ಉಚಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ನೂರಾರು ಜನ ಮಹಿಳೆಯರು ಭಾಗವಹಿಸಿ ತಮ್ಮ ತಮ್ಮ ಕಲೆಯನ್ನು ರಂಗೋಲಿ ಬಿಡಿಸಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನಗಳು ಪಡೆದ ಮಹಿಳೆಯರಿಗೆ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೆ ಸಮಾಧಾನಕರ ಬಹುಮಾನವಿತರಿಸಿ ಶಾಸಕ ಎಸ್ ಮುನಿರಾಜು ಅವರು ಮಾತನಾಡಿದರು.
ಕೆಂಪೇಗೌಡ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಎಂ.ಎನ್ (ಮಂಗಳ ವಾಟರ್) ಅವರು ಸರ್ವರಿಗೂ ಸ್ವಾಗತಿಸಿದರು.ಜಾನಪದ ಕಲಾವಿದ ಕುಣಿಗಲ್ ರಾಮಚಂದ್ರ ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಮಾಜಿ ಅಧ್ಯಕ್ಷ ನಾಗೇಶ್, ಬಿಜೆಪಿ ಮುಖಂಡ ಹಾಗೂ ಕೈಗಾರಿಕಾ ಉದ್ಯಮಿ ದಿನೇಶ್, ಕಂಪ್ಯೂಟರ್ ವಿಜಯಕುಮಾರ್, ಕೆಂಪೇಗೌಡ ಬಡಾವಣೆಯ ಸಮಸ್ತ ನಾಗರಿಕ ಬಂಧು ಭಗನಿಯರು ಮುಂತಾದವರು ಇದ್ದರು.
ವರದಿ :ಅಯ್ಯಣ್ಣ ಮಾಸ್ಟರ್