ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡಿನ ಗಜಾನನ ನಗರದಲ್ಲಿ ಮೂರನೇ ಅಡ್ಡ ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಕ್ಷೇತ್ರದ ಶಾಸಕ ಎಸ್ ಮುನಿರಾಜು ಚಾಲನೆ ನೀಡಿದರು.
ನಂತರ ಅವರು ಬಿಬಿಎಂಪಿ ಇಂಜಿನಿಯರ್ ಗಳಿಗೆ ಕಟ್ಟು ನಿಟ್ಟಾಗಿ ರಸ್ತೆ ಕಾಮಗಾರಿ ಆಗಬೇಕು ಕಳಪೆ ಕಾಮಗಾರಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಎಸ್ ಮುನಿರಾಜು ಇಂಜಿನಿಯರ್ ಗಳಿಗೆ ತರಾಟೆ ತೆಗೆದುಕೊಂಡರು.
ಇದೇ ವೇಳೆ ಸಾರ್ವಜನಿಕರ ಹವಾಲುಗಳು ಆಲಿಸಿದರು ಅವುಗಳ ಶೀಘ್ರದಲ್ಲಿ ಬಗೆಹರಿಸುವುದಾಗಿ ಶಾಸಕ ಎಸ್ ಮುನಿರಾಜು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಹಾಗೂ ಆರ್.ಎಸ್.ಎಸ್. ಪ್ರಮುಖ ರಂಗಸ್ವಾಮಿ, ಮಾಜಿ ಪಾಲಿಕೆ ಸದಸ್ಯೆ ಶ್ರೀಮತಿ ಭಾಗ್ಯಮ್ಮ ಅವರ ಪತಿ ಬಿಜೆಪಿ ಹಿರಿಯ ಮುಖಂಡ ಕೃಷ್ಣಯ್ಯ, ಡಾ. ನಾಗೇಶ್ ಕುಮಾರ್, ಸಪ್ತಗಿರಿ ಆನಂದ್, ಕುಮಾರ್, ಪುಟ್ಟಸ್ವಾಮಿ, ವೆಂಕಟೇಶ್, ಮುನಿರಾಜು, ಹರೀಶ್, ಲೋಕೇಶ್ ಗಜಾನನ ನಗರದ ಸಮಸ್ತ ಮುಖಂಡರು ಮಹಿಳೆಯರು ಮುಂತಾದವರು ಇದ್ದರು.
ವರದಿ:ಅಯ್ಯಣ್ಣ ಮಾಸ್ಟರ್