ಬೆಂಗಳೂರು: –ಪೀಣ್ಯ,ದಾಸರಹಳ್ಳಿ ರಾಜಗೋಪಾಲ್ ನಗರ ವಾರ್ಡಿನ ಪ್ರಭಾವಿ ಬಿಜೆಪಿ ಮುಖಂಡರು ಹಾಗೂ ಕೈಗಾರಿಕೋದ್ಯಮಿಗಳಾದ ದಿನೇಶ್ ರವರು ತಮ್ಮ ಹುಟ್ಟುಹಬ್ಬವನ್ನು ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಅವರ ಧರ್ಮಪತ್ನಿ ಶ್ರೀಮತಿ ಸುಜಾತ ಮುನಿರಾಜು, ಶಾಸಕ ಮುನಿರಾಜು ಅವರ ಸುಪುತ್ರಿ ರೇಷ್ಮಾ ಗುರು ನಿಶ್ಚಲ್, ಅಳಿಯ ಗುರುನಿಶ್ಚಲ್, ದಿನೇಶ್ ಅವರ ಧರ್ಮಪತ್ನಿ ಶ್ರೀಮತಿ ಸವಿತಾ ದಿನೇಶ್, ಸುಪುತ್ರಿ ಕೃತಿಕಾ, ಸುಪುತ್ರ ಧೀಗಂತ ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ತಮ್ಮ ಹಿತೈಷಿಗಳು ಹಾಗೂ ಅಪಾರ ಅಭಿಮಾನಿಗಳೊಂದಿಗೆ ಜಿಕೆಡಬ್ಲ್ಯೂ ಲೇಔಟ್ ನಲ್ಲಿ ಇರುವ ಅವರ ಸ್ವಗ್ರಹದಲ್ಲಿ ಆವರಣದಲ್ಲಿ ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಿಕೊಂಡರು.
ಈ ವೇಳೆ ಮಾತನಾಡಿದ ದಾಸರಹಳ್ಳಿ ಶಾಸಕ ಎಸ್ ಮುನಿರಾಜು, ‘ದಿನೇಶ್ ರವರು ತಮ್ಮ ಸ್ವಂತಕ್ಕಾಗಿ ಏನನ್ನು ನಿರೀಕ್ಷಿಸದೇ ವಾರ್ಡಿನ ಜನರ ಕಷ್ಟಗಳು ಹಾಗೂ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತಾ ಜನಸ್ನೇಹಿ ರಾಜಕಾರಣಿಯಾಗಿದ್ದಾರೆ. ನಾವು ಮಾಡಿದ ಕೆಲಸ ಮಾತ್ರ ಶಾಶ್ವತವಾಗಿ ಜನಗಳ ಕಣ್ಮುಂದೆ ಇರುತ್ತೆ ಅನ್ನುವ ಸಿದ್ಧಾಂತ ದೊಂದಿಗೆ ಸಮಾಜ ಸೇವೆ ಮಾಡುತ್ತಾ ಬೇರೆಯವರಿಗೆ ಮಾದರಿಯಾಗಿರುವ ಇವರಿಗೆ ರಾಜಕೀಯವಾಗಿ ಯಶಸ್ಸು ಗಳಿಸಲಿ’, ಎಂದು ಶಾಸಕ ಎಸ್ ಮುನಿರಾಜು ಹುಟ್ಟುಹಬ್ಬದ ಶುಭ ಕೋರಿ ಮಾತಾಡಿದರು.
ಹುಟ್ಟು ಹಬ್ಬದ ಅಂಗವಾಗಿ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ನು ವಿತರಣೆ ಮಾಡಲಾಯಿತು. ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ವೃದ್ಧರಿಗೆ ಮತ್ತು ಪೌರ ಕಾರ್ಮಿಕರಿಗೆ ಸಿಹಿ ತಿನಿಸುವ ಮೂಲಕ ಸರಳವಾಗಿ ವಿನೂತನವಾಗಿ ಅರ್ಥ ಪೂರ್ಣ ವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.ಹುಟ್ಟುಹಬ್ಬಕ್ಕೆ ಆಗಮಿಸಿದ ಎಲ್ಲರಿಗೂ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಹುಟ್ಟು ಹಬ್ಬದ ಅಂಗವಾಗಿ ಖ್ಯಾತ ಜಾನಪದ ಕಲಾವಿದ ಕುಣಿಗಲ್ ರಾಮಚಂದ್ರ ರವರಿಂದ ಸಂಗೀತ ರಸ ಮಂಜರಿ ಜೊತೆಗೆ ಕಾರ್ಯಕ್ರಮ ನಿರೂಪಣೆ ಮಾಡಿದರು.
ಕಂಪ್ಯೂಟರ್ ವಿಜಯ್ ಸರ್ವರಿಗೂ ಸ್ವಾಗತ ಕೋರಿದರು.ಬಿಜೆಪಿ ಮಾಜಿ ಅಧ್ಯಕ್ಷ ನಾಗೇಶ್ ಅವರು ವಂದನಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಗಂಗಾಧರ್, ಜೆಡಿಎಸ್ ಮುಖಂಡ ನರಸಿಂಹ ಮೂರ್ತಿ(ಸಿಂಹ),ರಾಜಗೋಪಾಲ್ ನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ (ಮಂಗಳ ವಾಟರ್),ಮೋಹನ್( ಮೋಹನ್ ಎಲೆಕ್ಟ್ರಾನಿಕ್ಸ್), ವೈ.ಜಿ ನಾಗರಾಜ್, ಆರ್.ಸಿ ಹರೀಶ್, ಡಬಲ್ ರಾಮಣ್ಣ, ರಾಧಾಕೃಷ್ಣ ಶೆಟ್ಟಿ, ಏಳುಮಲೈ, ಮೂರ್ತಿ ಸೇರಿದಂತೆ ಹಲವಾರು ಮುಖಂಡರು, ಮಹಿಳೆಯರು ಕಾರ್ಯಕರ್ತರು, ಸ್ಥಳಿಯ ಸಮಸ್ತ ನಾಗರಿಕರು ದಿನೇಶ್ ಆವರಿಗೆ ಹೂವು ಗುಚ್ಚು ನೀಡಿ ಸಿಹಿ ತಿನ್ನಿಸಿ ಹುಟ್ಟುಹಬ್ಬದ ಶುಭ ಹಾರೈಸಿದರು.
ವರದಿ:-ಅಯ್ಯಣ್ಣ ಮಾಸ್ಟ