Ad imageAd image

ಅಣ್ಣಾಸಾಹೇಬ ಜೊಲ್ಲೆ ಯವರ ಪರವಾಗಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಹಾಂತೇಶ ಕವಟಗಿಮಠ ಪ್ರಚಾರ

Bharath Vaibhav
ಅಣ್ಣಾಸಾಹೇಬ ಜೊಲ್ಲೆ ಯವರ ಪರವಾಗಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಹಾಂತೇಶ ಕವಟಗಿಮಠ ಪ್ರಚಾರ
WhatsApp Group Join Now
Telegram Group Join Now

ಚಿಕ್ಕೋಡಿ: ಲೋಕಸಭೆ ಚುನಾವಣೆ ಅಂಗವಾಗಿ ಚಿಕ್ಕೋಡಿ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾದ  ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಯವರು ಪ್ರಚಾರ ಸಭೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಭಾರತವನ್ನೂ ಬಡತನದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನರೇಂದ್ರ ಮೋದಿ ಜಿ ಅವರು ದೊಡ್ಡ ಯೋಜನೆಯನ್ನೇ ರೂಪಿಸಿದ್ದಾರೆ.ಮುಂಬರುವ 5 ವರ್ಷಗಳಲ್ಲಿ ಅದನ್ನು ಸಾಕಾರವಾಗುವುದನ್ನು ನೋಡಲು ಮತ್ತೆ ಮೋದಿ ಜಿಯವರನ್ನು ಪ್ರಧಾನಿಯನ್ನಾಗಿಸೋಣ. ಬಿಜೆಪಿ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಬಹುಮತದಿಂದ ಗೆಲ್ಲಿಸೋಣವೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಪ್ರಭಾರಿಗಳಾದ ಚಂದ್ರಶೇಖರ ಕವಟಗಿ,ರಾಜ್ಯ ಸೌಹಾರ್ದ ಫೇಡರೇಶನ್ ಉಪಾಧ್ಯಕ್ಷರಾದ ಜಗದೀಶ ಕವಟಗಿಮಠ, ಸಂಜಯ ಅಡಕೆ, ಸುಭಾಷ ಕವಲಾಪುರೆ,ಮಾಜಿ ಶಾಸಕರಾದ ಶ್ರೀ ಬಾಳಾಸಾಹೇಬ ವಡ್ಡರ, ಜಿಲ್ಲಾಧ್ಯಕ್ಷರಾದ ಸತೀಶ ಅಪ್ಪಾಜಿಗೋಳ,ಪುರಸಭೆ ಮಾಜಿ ಅಧ್ಯಕ್ಷರಾದ , ಪ್ರವೀಣ ಕಾಂಬಳೆ, ಪವನ ಮಹಾಜನ,ಸ್ಥಳೀಯ ಮುಖಂಡರು,ಗಣ್ಯರು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!