ಕಾಗವಾಡ: ತಾಲೂಕಿನ ಐನಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡುತ್ತಾ ಗುಣಧರನಂದಿ ಮಹಾರಾಜರು ಜೈನ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಹಾಗೂ ಅವರ ಬೇಡಿಕೆಗಳು ಅತ್ಯಂತ ಸ್ತುತ್ಯಾರ್ಯರವಾಗಿದೆ.ಕಳೇದ ಹಲವಾರು ದಿನಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇದ್ದಾರೆ. ನಾವು ರಾಜ್ಯಪಾಲರ ಮುಖಾಂತರ ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಸಿಗಬೇಕಾದ ಸವಲತ್ತುಗಳನ್ನು ಬೆಳಗಾವಿ ,ಚಿಕ್ಕೋಡಿ. ಕಾಗವಾಡ ಅಥಣಿ. ರಾಯಬಾಗ.ನಿಪ್ಪಾಣಿ,ಎಲ್ಲ ಶಾಸಕರು ಪಕ್ಷಾತೀತವಾಗಿ ಒತ್ತಡ ತಂದು ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಕಾಂಗ್ರೆಸ ಪಕ್ಷಕ್ಕೆ ಇದೇ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಜೈನ ಮುನಿ ವಿದ್ಯಾನಂದ ಮಹಾರಾಜರು ಹಸ್ತದ ಚಿಹ್ನೆಯನ್ನು ನೀಡದ್ದಾರೆ. ಕಾರಣ ಅವರ ಜೈನ ಸಮಾಜದ ಋಣ ಕಾಂಗ್ರೆಸ ಪಕ್ಷದ ಮೇಲಿದೆ ಅದನ್ನು ನಮ್ಮ ಸರಕಾರ ಬೇಡಿಕೆಗಳನ್ನು ಈಡೇರಿಸಿ ಸಮಾಜದ ಋಣವನ್ನುತೀರಿಸಲು ಬಧ್ಧರಿದ್ದೇವೆ. ಎಂದರು.
ಮಾಜಿ ಸಚಿವ ಶ್ರೀಮಂತ ಪಾಟೀಲ : ಮಾತನಾಡುತ್ತಾ ನಾನು ಅಲ್ಪಸಂಖ್ಯಾತ ಹಾಗು ಜವಳಿ ಸಚಿವನಿದ್ದಾಗ ಅಲ್ಪಾವಧಿಯಲ್ಲಿದ್ದರೂ ಶ್ರವಣಬೆಳಗೂಳ ಕ್ಷೇತ್ರಕ್ಕೆ ೫೦ ಕೋಟಿ ರೂ, ಹಾಗೂ ಜೈನ ಸಮಾಜದ ಸಮುದಾಯ ಭವನ .ಬಸದಿ ಜಿರ್ಣೋದ್ದಾರಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ನೀಡಿದ್ದು ನನಗೆ ತೃಪ್ತಿಇದೆ. ಈಗ ಅವರ ಬೇಡಿಕೆ ಈಡೇರಿಸಲು ಸರಕಾರ ಗಮನಹರಿಸಬೇಕೆಂದರು.
ಸಂಜಯ ಪಾಟೀಲ: ಮಾತನಾಡುತ್ತಾ ಗುಣಧರನಂದಿ ಮಹಾರಾಜರು ನಿರ್ವಾಣ ಮುನಿಗಳಿದ್ದರು ಅವರ ಸಮಾಜದ ಮೇಲೆ ಇರುವ ಕಳಕಳಿ ಅಪಾರವಾದದ್ದು. ಜೈನ ಸಮಾಜದ ಶ್ರೋಯೋಬಿದ್ದಿಗಾಗಿ ಮುನಿಗಳ ಭಟ್ಟಾರಕರ ರಕ್ಷಣೆಗಾಗಿ ಅವರ ದಿಟ್ಟ ಹೋರಾಟ ಈ ಬೃಹತ ಸಮಾವೇಶ ಸಾಕ್ಷಿಯಾಗಿದೆ.
ಅಭಯ ಪಾಟೀಲ: ಮಾತನಾಡುತ್ತಾ ಜೈನ ಸಮಾಜದ ಬಗ್ಗೆ ಹಾಗೂ ಬೇಡಿಕೆಗಳ ಬಗ್ಗೆ ನಮ್ಮ ಸಮಾಜದ ಮುಖಂಡರು ಮಾಡುವಂತಾ ಕಾರ್ಯವನ್ನು ಗುಣಧರನಂದಿ ಮುನಿ ಮಹಾರಾಜರು ಮಾಡುತ್ತಿರುವದು ನಿಜಕ್ಕೂ ಶ್ಲಾಘನೀಯ. ಮಹಾರಾಜರ ಮೇಲೆ ಇಟ್ಟಿರುವಂತ ಭಕ್ತಿ, ಶಕ್ತಿಯನ್ನು ನೋಡಬೇಕಾದರೆ ಈ ಲಕ್ಷಾಂತ ಜನಸ್ತೋಮವೇ ಸಾಕ್ಷಿಯಾಗಿದೆ.
ಸುಮಾರು ಒಂದು ಲಕ್ಷ ಮೇಲ್ಪಟ್ಟು ಜನ ಜೈನ ಬೃಹತ್ ಸಮಾವೇಶಕ್ಕೆ ಸೇರಿದ್ದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ, ಅಭಯ್ ಪಾಟೀಲ್, ಪಾಟೀಲ್ ಪಾಟೀಲ್, ಲಕ್ಷ್ಮಣ ಸೌದಿ, ರಾಜು ಕಾಗೆ, , ಶ್ರೀಮಂತ ಪಾಟೀಲ್ ಮಾತನಾಡಿದರು. ದುರ್ಯೋಧನ ಐಹೊಳೆ ವೀರ್ ಕುಮಾರ್ ಪಾಟೀಲ್, ಉತ್ತಮ್ ಪಾಟೀಲ್, ದಾದಾಗೌಡ ಪಾಟೀಲ್, ಸುನಿಲ್‌ಗೌಡ ಪಾಟೀಲ್, ಸಂಜಯ್ ಕುಚುನೂರೆ, ಶೀತಲ ಪಾಟೀಲ, ಅರುಣ ಎಲಗುದ್ರಿ, ಕೆ ಏ ವನಜೋಳಿ, ಅಮರ್ ದುರ್ಗನ್ನವರ್, ಧೂಳಗೌಡ ಪಾಟೀಲ ಸಂಜಯ್ ನಾಡಗೌಡ, ಸುಶೀಲ್ ಕುಮಾರ್ ಬೆಳಗಲಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕುಮುದಾ ನಾಗಭೂಷಣ ನಿರೂಪಿಸಿದರು. ಸಂಜಯ್ ಕುಜನೂರ ಸ್ವಾಗತಿಸಿದರು. ಅಖಿಲ ಭಾರತ ಭಟ್ಟಾರಕ ಸಮ್ಮೇಳನದಲ್ಲಿ ಕರ್ನಾಟಕ ಮಹಾರಾಷ್ಟç ವಿವಿಧ ಕಡೆಗಳಿಂದ ಹಲವಾರು ಭಟ್ಟಾರಕರು , ಹಾಗೂ ಜೈನ ಮುನಿಗಳು ಉಪಸ್ಥಿತರಿದ್ದರು.
ಅಖಿಲ ಭಾರತ ಭಟ್ಟಾರಕ ಸಮ್ಮೇಳನ, ಬೃಹತ ಜೈನ ಸಮಾವೇಶದಲ್ಲಿ ವಿವಿಧ ಕಡೆಯಿಂದ ಜೈನ ಸಮಾಜದ ಭಟ್ಟಾರಕ ಶ್ರೀಗಳಿಗೆ ಹಾಗೂ ೧೦೮ ಮಹಿಳಾ ಮಂಡಲದ ಅಧ್ಯಕ್ಷರಿಗೆ ರಾಜ್ಯಪಾಲರಿಂದ ಸನ್ಮಾನಸಿಲಾಯಿತು.
ವರದಿ: ಚಂದ್ರಕಾಂತ ಕಾಂಬಳೆ