Ad imageAd image

ಶಾಸಕ ಶರಣಗೌಡ ಕಂದಕೂರ ಕಿರುಕುಳ ತಡೆದುಕೊಳ್ಳಲಾಗದೇ ದಯಾಮರಣ ನೀಡುವಂತೆ ಮನವಿ

Bharath Vaibhav
ಶಾಸಕ ಶರಣಗೌಡ ಕಂದಕೂರ ಕಿರುಕುಳ ತಡೆದುಕೊಳ್ಳಲಾಗದೇ ದಯಾಮರಣ ನೀಡುವಂತೆ ಮನವಿ
WhatsApp Group Join Now
Telegram Group Join Now

ಗುರುಮಿಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರ ದೌರ್ಜನ್ಯ ಹಾಗೂ ಕಿರುಕುಳ ತಡೆದುಕೊಳ್ಳಲಾಗದೇ ರಾಷ್ಟ್ರಪತಿಯವರಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿಯವರಿಗೆ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಯವರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದಯಾಮರಣ ನೀಡುವಂತೆ ಕೋರಿ ಮನವಿ ಸಲ್ಲಿಕೆ

 

ಗುರುಮಠಕಲ್ : ಗುರುಮಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರ ದೌರ್ಜನ್ಯ ಹಾಗೂ ಕಿರುಕುಳ ಹೆಚ್ಚಾಗಿದೆ ಎಂದು ಕಿಲ್ಲನಕೇರಾ ಗ್ರಾಮಸ್ಥ ಬೀರಲಿಂಗಪ್ಪ ನರಸಪ್ಪ ರಿಪೋರ್ಟರ್ ಅವರು ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದಯಾಮರಣ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ.

ಶಾಸಕ ಶರಣಗೌಡ ಕಂದುಕುರ್ ರಜಶೇಖರ ಗೌಡ ಮತ್ತು ಮಲ್ಲಿಕಾರ್ಜುನ ಮಾಲಿಪಾಟೀಲ ಅವರಿಂದ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರಿಂದ ಸೈದಾಪುರ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ನಾನು ವಾರ್ತಾ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ ನನ್ನನು, ವಾರ್ತಾ ಇಲಾಖೆಯ ತೆಗೆಯಲು ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಧಮ್ಮಿ ಹಾಕಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನನ್ನು ಕೆಲಸದಿಂದ ತೆಗೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಕಿಲ್ಲನಕೇರಿ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಬಿಡುಗಡೆಯಾದ 3.98 ಲಕ್ಷ ಅನುದಾನಕ್ಕೆ ತಮ್ಮ ಕಾರ್ಯಕರ್ತರಿಂದ ಗ್ರಾಮಸ್ಥರ ಪೋರ್ಜರಿ ಸಹಿ ಮಾಡಿಸಿ ಬಿಲ್ ಮಾಡದಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ತಡೆ ಒಡ್ಡಿದ್ದಾರೆ. ದೇವಸ್ಥಾನ ಸಾಲ ಮಾಡಿದ್ದೇನೆ. ಪೂರ್ಣಗೊಳ್ಳುವ ಉದ್ದೇಶಪೂರ್ವಕವಾಗಿ ನಿರ್ಮಾಣಕ್ಕಾಗಿ ಕಾಮಗಾರಿ ಹಂತದಲ್ಲಿ ಕಾಮಗಾರಿ ಬದಲಾವಣೆ ಮಾಡಿ ಅನುದಾನ ಬೇರೆ ಊರಿಗೆ ಕೊಡಿ ಎಂದು ಜಿಲ್ಲಾಧಿಕಾರಿ ಹಾಗೂ ನಿರ್ಮಿತಿ ಕೇಂದ್ರದವರಿಗೆ ಶಾಸಕರು ಪತ್ರ ಬರೆದಿದ್ದಾರೆ. ಹೀಗೆ ಹಲವಾರು ರೀತಿಯಲ್ಲಿ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ವರದಿ : ರವಿ ಬುರನೊಳ

WhatsApp Group Join Now
Telegram Group Join Now
Share This Article
error: Content is protected !!