Ad imageAd image

ವಿವಿಧ ಕಡೆ ಕಾಮಗಾರಿಗೆ ಚಾಲನೆ -ಶಾಸಕ ಎಸ್ ಆರ್ ವಿಶ್ವನಾಥ್

Bharath Vaibhav
ವಿವಿಧ ಕಡೆ ಕಾಮಗಾರಿಗೆ ಚಾಲನೆ -ಶಾಸಕ ಎಸ್ ಆರ್ ವಿಶ್ವನಾಥ್
WhatsApp Group Join Now
Telegram Group Join Now

ಯಲಹಂಕ : ಕ್ಷೇತ್ರದ ಆಲೂರು, ಕುದುರೆಗೆರೆ, ಮಾದನಾಯಕನಹಳ್ಳಿ, ಅಂಚೆಪಾಳ್ಯ, ಚಿಕ್ಕಬಿದರಕಲ್ಲು, ತೋಟದಗುಡ್ಡದಹಳ್ಳಿ, ಮತ್ತು ತೆಮ್ಮೆನಹಳ್ಳಿಪಾಳ್ಯ ಸೇರಿದಂತೆ ಏಳು ಕೋಟಿ ವೆಚ್ಚದಲ್ಲಿ ರಸ್ತೆ ಚರಂಡಿ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಪೂಜೆ ಪುನಸ್ಕಾರ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕ‌ ಯಲಹಂಕ ಕ್ಷೇತ್ರದಲ್ಲಿ ಸಾಕಷ್ಟು ಬಡಾವಣೆಗಳಲ್ಲಿ ಕಾಮಗಾರಿಗಳು ಚಾಲ್ತಿ ಇವೆ ಇನ್ನೂ ನೂರಾರು ಕೋಟಿಗಳ ಅನುದಾನವನ್ನು ನಿರೀಕ್ಷೆ ಮಾಡುತ್ತಿದ್ದು ಆದರೆ ಇಲ್ಲಿಯವರೆಗೂ ಸರ್ಕಾರ ಒಂದು ನೆಯಪೈಸವನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ ಆಡಳಿತ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿದ್ದು ವಿರೋಧ ಪಕ್ಷದ ಶಾಸಕರಿಗೆ ಕಡಿಮೆ ಅನುದಾನ ನೀಡಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ ನಾವು ಹೆಚ್ಚಿನ ಅನುದಾನವನ್ನು ನಿರೀಕ್ಷೆ ಮಾಡುತ್ತಿದ್ದು ಸರ್ಕಾರ ಭರವಸೆ ನೀಡಿದ್ದು ಭರವಸೆ ಈಡೇರದೆ ಹೋದರೆ ಮುಂದೆ ಜನತೆ ಸೇರಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗಾಗಿ ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಂ .ರಾಮಮೂರ್ತಿ, ಅಧ್ಯಕ್ಷೆ ಪುಷ್ಪ ಮಂಜುನಾಥ್, ಉಪಾಧ್ಯಕ್ಷೆ ಪದ್ಮಾವತಿ ಮಂಜುನಾಥ್, ಸದಸ್ಯರಾದ ತೆಮ್ಮನಹಳ್ಳಿ ಜಯರಾಮ್ ಮತ್ತು ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!