ಹಾವೇರಿ: ಹಾನಗಲ್ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 5೦;5೦ ಮಾದರಿಯಡಿ ಶಾಸಕ ಶ್ರೀನಿವಾಸ ಮಾನೆ ಲ್ಯಾಪ್‌ಟಾಪ್, ಖುರ್ಚಿ ಸೇರಿದಂತೆ ನಾನಾ ಸಾಮಗ್ರಿಗಳನ್ನು ವಿತರಿಸಿದರು.
ಸಾಮಗ್ರಿಗಳಿಗೆ ಒಟ್ಟು 63,5೦೦ ರೂ. ವೆಚ್ಚ ತಗುಲಿದ್ದು, ಈ ಪೈಕಿ ಅರ್ಧ ಹಣವನ್ನು ಗ್ರಾಮಸ್ಥರು ಸಂಗ್ರಹಿಸಿ ನೀಡಿ, ಉಳಿದರ್ಧ ಹಣವನ್ನು ಶಾಸಕ ಮಾನೆ ವೈಯಕ್ತಿಕವಾಗಿ ಭರಿಸಿದ್ದಾರೆ. ಸಾಮಗ್ರಿಗಳನ್ನು ವಿತರಿಸಿದ ಶ್ರೀನಿವಾಸ ಮಾನೆ, ಕಲಿತ ಸರ್ಕಾರಿ ಶಾಲೆಗಳತ್ತ ಒಮ್ಮೆ ನೋಡಿ ಅಗತ್ಯ ಸೌಲಭ್ಯ ಕಲ್ಪಿಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ತಾಲೂಕಿನಲ್ಲಿ ಇದುವರೆಗೆ 5೦;5೦ ಮಾದರಿಯಡಿ 112 ಸರ್ಕಾರಿ ಶಾಲೆಗಳಿಗೆ 3 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ಸಾಮಗ್ರಿ ಒದಗಿಸಿ, ಸೌಲಭ್ಯ ಕಲ್ಪಿಸಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಗಮನ ನೀಡಲಾಗಿದೆ.
ಏಕಕಾಲಕ್ಕೆ 5೦ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಸಹ ಕೈ ಜೋಡಿಸಿದರೆ ಸರ್ಕಾರಿ ಶಾಲೆಗಳ ಅವಶ್ಯಕತೆಗಳಿಗೆ ಸ್ಪಂದಿಸಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ
ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ವರದಿ: ರಮೇಶ್ ತಾಳಿಕೋಟಿ




