ಬೆಂಗಳೂರು: ಯಶವಂತಪುರ ವಿಧಾನ ಸಭಾ ಕ್ಷೇತ್ರದ ದೊಡ್ಡಬಿದರಕಲ್ಲು ಗ್ರಾಮದಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡರಿಂದ ಹೊಸ ವರ್ಷ ಆಚರಣೆ ಹಾಗೂ ಹಿರಿಯ ನಾಯಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ವನ್ನು ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಗೌಡರ ಸಹಕಾರ ಮಾರ್ಗದರ್ಶನ ಅನುಮತಿ ಮೇರೆಗೆ ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಮಾ ಜನಾರ್ದನ್, ವಾರ್ಡ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಮಹಾಲಕ್ಷ್ಮೀ, ಮಂಜುಳಾ, ವೇದಾವತಿ, ಶೋಭಾ, ಮೇರಿಯಮ್ಮ, ಚಂದ್ರಕಲಾ ಕಾಂಗ್ರೆಸ್ ಮುಖಂಡರಾದ ಟ್ರಾವೆಲ್ಸ್ ಮಂಜುನಾಥ್ ಕೇಶವಮೂರ್ತಿ ಸುರೇಶ್ ಗೌಡ್ರು,ಅವರು ಸಮ್ಮುಖದಲ್ಲಿ ಭೈರವೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿತ್ತು.
ಹೊಸ ವರ್ಷದ ಆಚರಣೆಯನ್ನು ಶಾಸಕ ಎಸ್ ಟಿ ಸೋಮಶೇಖರ್ ಗೌಡರು ಜ್ಯೋತಿ ಬೆಳಗಿಸಿ ಕೆಕ್ ಕತ್ತರಿಸಿ ಸರ್ವರಿಗೂ ಹೊಸ ವರ್ಷದ ಶುಭ ಕೋರಿದರು.
ನಂತರ ಹಿರಿಯ ನಾಗರಿಕ ಕಾಂಗ್ರೆಸ್ ಹಿರಿಯ ಮುಖಂಡ ಟ್ರಾವೆಲ್ಸ್ ಮಂಜುನಾಥ್ ಅವರು ಧರ್ಮ ಪತ್ನಿ ಹಾಗೂ ನಾಗರಿಕರಿಗೆ ಸನ್ಮಾನಿಸಿ ಗೌರವಿಸಿ ಮಾತಾಡಿದರು.
ಕಾಂಗ್ರೆಸ್ ಮುಖಂಡ ಕೇಶವಮೂರ್ತಿ ಸರ್ವರಿಗೂ ಸ್ವಾಗತ ಕೋರಿ ಸುಮಾರು 500ಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಲ್ಲರೂ ದಯವಿಟ್ಟು ಊಟಮಾಡಿ ಕೊಂಡು ಹೋಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾರ್ಡ್ ಕಮಿಟಿ ಹಿರಿಯ ಸದಸ್ಯ ಮಂಜುನಾಥ ಎಂ (ಟ್ರಾವಲ್ಸ್) ದೊಡ್ಡ ಬಿದರಿಕಲ್ಲ್ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಲಿಖಿತ್ ಗೌಡ,ಅಂದ್ರಳ್ಳಿ ಎ ರವಿ, ಶ್ರೀನಿವಾಸ್, ಗಂಗರಾಜು, ಶ್ರೀಧರ್, ಬೈಲಾಂಜನೇಯ,ನಾರಾಯಣಸ್ವಾಮಿ, ಹನುಮೇಗೌಡ, ಹನುಮಯ್ಯ,ಹರೀಶ್, ಕಾಂಗ್ರೆಸ್ ಮುಖಂಡರು ಮಹಿಳಾ ಮುಖಂಡರು ಕಾರ್ಯಕರ್ತರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್