ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡಿನ ವ್ಯಾಪ್ತಿಗೆ ಬರುವ ಮಹದೇಶ್ವರ ನಗರದಲ್ಲಿ ನೂತನ ಸಂಜೀವಿನಿ ಗ್ಲೋಬಲ್ ಆಸ್ಪತ್ರೆ ಉದ್ಘಾಟನೆ ಮತ್ತು “ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ” ಆಸ್ಪತ್ರೆಯ ಮಾಲೀಕ ಹಾಗೂ ಹೆಸರಾಂತ ಖ್ಯಾತ ವೈದ್ಯ ಡಾ. ವಿಜಯಕುಮಾರ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ಮನುಷ್ಯನಿಗೆ ಈಗಿನ ಪರಿಸ್ಥಿತಿಯಲ್ಲಿ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಆಸ್ಪತ್ರೆ ಸ್ಥಾಪನೆ ನನ್ನ ಕ್ಷೇತ್ರದಲ್ಲಿ ಮಾಡಿದ್ದು ತುಂಬಾ ಸಂತೋಷ ಡಾ. ವಿಜಯಕುಮಾರ್ ಅವರು ಜನ ಸಾಮಾನ್ಯರಿಗೆ ಹೊರೆ ಆಗದಂತೆ ಜನರ ಸೇವೆ ಮಾಡಲಿ ಎಂದು ಶಾಸಕ ಎಸ್ ಟಿ ಸೋಮಶೇಖರ್ ಉದ್ಘಾಟಿಸಿ ಮಾತಾಡಿದರು.

ಈ ಸಂದರ್ಭದಲ್ಲಿ ಹೆರೋಹಳ್ಳಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶ್ರೀಧರ್, ಮಹಿಳಾ ಬ್ಲಾಕ್ ಅಧ್ಯಕ್ಷೆ ಸುಮ ಜನಾರ್ಧನ್, ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ನಾಗವೇಣಿ,
ಹೇರೋಹಳ್ಳಿ ವಾರ್ಡಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಮತಾ, ಕಾಂಗ್ರೆಸ್ ಮುಖಂಡರಾದ ಚಂದ್ರಣ್ಣ, ದೇವೇಗೌಡ, ರಘು, ಸೋಮಣ್ಣ, ಲೋಕೇಶ್, ಅನಂತರಾಮಯ್ಯ, ರಮೇಶ್,ಸಂಜೀವಿನಿ ಗ್ಲೋಬಲ್ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ವರ್ಗದವರು ಮತ್ತು ಹೆರೋಹಳ್ಳಿ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




