ಬೆಂಗಳೂರು: -ದೇಶ ರಾಜ್ಯ ಮತ್ತು ನಾಡಿನಲ್ಲಿ ಹೋಟೆಲ್ ತಿಂಡಿ ತಿನಿಸು, ಚಹಾ, ತಂಪಾದ ಪಾನಿ, ಕೋಲ್ಡ್ ಐಸ್ ಕ್ರೀಮ್ ತಿಂಡಿ ಊಟ ಹೊರಗಡೆ ತಿನ್ನುವ ನಾಗರಿಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಗೌಡ್ರು ಹೇಳಿದರು.ಅವರು ಡಿ.ಗ್ರೂಪ್ ಶ್ರೀಗಂಧ ಕಾವಲು ಸಲ್ಲಾಪುರದಮ್ಮ ದೇವಸ್ಥಾನ ರಸ್ತೆಯಲ್ಲಿರುವ ನೂತನವಾಗಿ ನಿರ್ಮಿಸಿರುವ ಸುಮಧು ಕೆಫೆ – ಬಾಯ್ ಚಟ ಹೋಟೆಲ್ ನ್ನು ರಾಜ್ಯ ಕಾಂಗ್ರೆಸ್ ಸಮಿತಿ ಪದವೀಧರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಸುಮಧು ಬಿಲ್ಡ್ ಟೆಕ್ ಮಾಲೀಕ ಮಧುಸೂದನ್ ಎಂ.ಅವರ ಧರ್ಮ ಪತ್ನಿ ಶ್ರೀಮತಿ ಸುಮ ಮಧುಸೂದನ್ ಹಾಗೂ ಕುಟುಂಬ ಸದಸ್ಯರ ನೇತೃತ್ವದಲ್ಲಿ ಸುಮಧು ಕೆಫೆ ಮತ್ತು ಬಾಯ್ ಚಟ ಹೋಟೆಲ್ ಆವರಣದಲ್ಲಿ ಮಹಾ ಲಕ್ಷ್ಮೀ ಪೂಜಾ ಪುನಸ್ಕಾರ ಮಹಾಮಂಗಳಾರತಿ ನಡೆಯಿತು ಶಾಸಕ ಎಸ್ ಟಿ ಸೋಮಶೇಖರ್ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ರಿಬ್ಬನ್ ಕತ್ತರಿ
ಉದ್ಘಾಟಿಸಿ ಅವರು ಮಾತನಾಡಿದರು.
ಮಧುಸೂದನ್ ಎಂ.ಅವರ ಧರ್ಮ ಪತ್ನಿ ಶ್ರೀಮತಿ ಸುಮ ಮಧುಸೂದನ್ ಮತ್ತು ಅವರು ಸುಪುತ್ರರು ಸರ್ವರಿಗೂ ಸ್ವಾಗತಿಸಿದರು.ಕೆಫೆ ಮತ್ತು ಬಾಯ್ ಚಟ ಹೋಟೆಲ್ ಮಾಲೀಕ ಮಧುಸೂದನ್ ನಮ್ಮ ಹೋಟೇಲ್ ದಲ್ಲಿ ಪರಿಶುದ್ಧವಾದ ಆಹಾರ ಪದಾರ್ಥಗಳು ಮತ್ತು ನಾಲಿಗೆಗೆ ಹಿತಕರ ಮತ್ತು ರುಚಿಕರವಾದ ತಿಂಡಿ ತಿನಿಸು ತೃಪ್ತಿ ಪಡಿಸುವ ನಿಟ್ಟಿನಲ್ಲಿ ಇಂದಿನಿಂದಲೇ ಕೆಫೆ ಮತ್ತು ಬಾಯ್ ಚಟ ಹೋಟೆಲ್ ಕಾರ್ಯ ನಿರ್ವಹಿಸುತ್ತದೆ.
ಸಾರ್ವಜನಿಕರು ಊಟ ತಿಂಡಿ ಚಾಟ್ಸ್ ರುಚಿ ನೋಡಿ ಮೊತ್ತೋಮೆ ಇದನ್ನು ತೆಗೆದು ಶುಚಿ ರುಚಿ ರುಚಿಯಾದ ಊಟ ತಿಂಡಿ ಚಾಟ್ಸ್ ಸವಿದ ಗ್ರಾಹಕರು ದೇವರುಗಳು ಮೋತ್ತೋಮ್ಮೆ ಸುಮಧು ಕೆಫೆ ಹೋಟೆಲ್ ಬಾಯ್ ಚಟದ ಕಡೆ ಬರುವಂತೆ ಬಾಯ್ ಚಟ ಹೋಟೆಲ್ ಕಡೆ ಮನಸ್ಸು ಎಳೆಯುತ್ತದೆ ಎಂದು ಗ್ರಾಹಕರಲ್ಲಿ ಮಾಧ್ಯಮ ಮೂಲಕ ಮಧುಸೂದನ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಎಸ್ ಟಿ ಸೋಮಶೇಖರ್ ಅವರ ಸುಪುತ್ರಿ ಹಾಗೂ ಬ್ಲೂಸಾಫ್ಟ್ ಕಂಪ್ಯೂಟರ್ ಮಾಲೀಕರು ಶ್ರೀಮತಿ ಹರ್ಷಿತಾ ಎಸ್ ಮತ್ತು ಅಳಿಯ ಶಿವಪ್ರಕಾಶ್, ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್ ನಟರಾಜ್, ಬಿ.ಆರ್ ನಾಯ್ಡು ಅಧ್ಯಕ್ಷರು ಜವಾಹರ್ ಬಾಲ ಭವನ ಸೊಸೈಟಿ ಕರ್ನಾಟಕ ಸರ್ಕಾರ, ಮಿಲಿಂದ್ ಧರ್ಮ ಸೇನಾ ಕಾರ್ಯದರ್ಶಿ ಕೆಪಿಸಿಸಿ, ಗಿರೀಶ್ ಕೃಷ್ಣೇಗೌಡ ಎಚ್, ಗುರುಪ್ರಸಾದ್ ಜಿ.ಪಿ.ಶ್ರೀ ಮತಿ ಆಯೆಷಾ ಸುಲ್ತಾನ್, ಶ್ರೀ ನಿವಾಸ್, ಮೋಹನ್ ಸೇರಿದಂತೆ ಮಧುಸೂದನ್ ಅಭಿಮಾನಿಗಳು ಹಿತೈಷಿಗಳು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದರು.
ವರದಿ:-ಅಯ್ಯಣ್ಣ ಮಾಸ್ಟರ್