Ad imageAd image

ಕರಿಹೊಬನಹಳ್ಳಿ ಸೇರಿದಂತೆ ಹಲವಾರು ಹಳ್ಳಿಗೆ ಕಾವೇರಿ ನೀರಿಗೆ ಚಾಲನೆ – ಶಾಸಕ ಎಸ್ ಟಿ ಸೋಮಶೇಖರ್

Bharath Vaibhav
ಕರಿಹೊಬನಹಳ್ಳಿ ಸೇರಿದಂತೆ ಹಲವಾರು ಹಳ್ಳಿಗೆ ಕಾವೇರಿ ನೀರಿಗೆ ಚಾಲನೆ – ಶಾಸಕ ಎಸ್ ಟಿ ಸೋಮಶೇಖರ್
WhatsApp Group Join Now
Telegram Group Join Now

ಬೆಂಗಳೂರು :– ಹಲವಾರು ದಶಕಗಳಿಂದ ಕಾವೇರಿ ನೀರನ ಬೇಡಿಕೆಯಾಗಿತ್ತು ಕಳೆದ ವಾರದಲ್ಲಿ ೧೧೦ ಹಳ್ಳಿಗಳಿಗೆ ಈ ಅತಿ ದೊಡ್ಡ ಮಹತ್ವಾಕಾಂಕ್ಷಿ ಯೋಜನೆಯಾದ ಕಾವೇರಿ ನೀರು ಸರಬರಾಜಿಗೆ ಸಿ ಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಚಾಲನೆ ನೀಡಿದರು ಎಂದು ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು.

ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡ ಬಿದರಿಕಲ್ಲು ವಾರ್ಡಿನ ವ್ಯಾಪ್ತಿಗೆ ಬರುವ ಕರಿಹೊಬನಹಳ್ಳಿ ಭಾಗದಲ್ಲಿ ವಾಸವಿರುವ ಸಾರ್ವಜನಿಕರಿಗೆ “ಕಾವೇರಿ ನೀರು ಸಂಪರ್ಕ ಅಭಿಯಾನಕ್ಕೆ ಬಿಡಬ್ಲ್ಯೂಎಸ್ ಎಸ್ಬಿ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕಾವೇರಿ ನೀರನ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಶಾಸಕ ಎಸ್ ಟಿ ಸೋಮಶೇಖರ್ ಮಾತಾಡಿದರು.

ಇದೆ ವೇಳೆ ಕರ್ನಾಟಕ ರಾಜ್ಯ ವಸತಿ ಮಹಾ ಮಂಡಳಿ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಚಿವ ಹಾಲಿ ಶಾಸಕ ಎಸ್ ಟಿ ಸೋಮಶೇಖರ್ ಅವರಿಗೆ ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಯುವ ಪ್ರಭಾವಿ ಮುಖಂಡ ಹಾಗೂ ಬಿಬಿಎಂಪಿ ಆಕಾಂಕ್ಷಿ ಅಭ್ಯರ್ಥಿ ವಿ ನಾಗರಾಜ್ ಅವರ ಶಾಸಕರಾದ ಎಸ್ ಟಿ ಸೋಮಶೇಖರ್ ರವರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಅಭಿನಂದನೆ ಸಲ್ಲಿಸಿದರು.

ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮಾತನಾಡಿದರು.ಎಸ್ಸಿ ಘಟಕದ ಕಾಂಗ್ರೆಸ್ ಮುಖಂಡ ಕೇಶವಮೂರ್ತಿ ಕಾರ್ಯ ಕ್ರಮ ನಿರೂಪಣೆ ಮಾಡಿದರು.ಈ ಸಂದರ್ಭದಲ್ಲಿ ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ದೊಡ್ಡ ಬಿದರಿಕಲ್ಲು ವಾರ್ಡಿನ ಬಿಬಿಎಂಪಿ ಪ್ರಭಾವಿ ಮುಖಂಡ ಮತ್ತು ಆಕಾಂಕ್ಷಿ ಅಭ್ಯರ್ಥಿ ವಿ ನಾಗರಾಜ್, ವಾರ್ಡ್ ಅಧ್ಯಕ್ಷ ಲಿಖಿತ್ ಗೌಡ, ಹಿರಿಯ ಮುಖಂಡ ಟ್ರಾವೆಲ್ ಮಂಜುನಾಥ್, ಅಂದ್ರಳ್ಳಿ ನಾಗರಾಜ,ನಾಗಣ್ಣ,ಶ್ರೀನಿವಾಸ್, ಸತೀಶ್ ,ಮಂಜು , ಶ್ರೀಕಾಂತ್, ಅವಿನಾಶ್ ಭಂಟಿ, ಗಂಗರಾಜು, ಹನುಮೇಗೌಡ,
ಮಹಿಳಾ ಮುಖಂಡರಾದ ಶೀಲಾ ಮಹಾಲಕ್ಷ್ಮಿ, ಕವಿತಾ ವಿಶ್ವಕರ್ಮ,ವೇದ ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಹಾಗೂ ಸಮಸ್ತ ನಾಗರಿಕ ಬಂಧು ಭಗನಿಯರು ಸಂಭಂದ ಪಟ್ಟ ಅಧಿಕಾರಿಗಳು ಇಂಜಿನಿಯರ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!