Ad imageAd image

ಯಶವಂತಪುರ ಕ್ಷೇತ್ರದಲ್ಲಿ ಸಂಕ್ರಾಂತಿ ಸುಗ್ಗಿ’ ಸಂಭ್ರಮಾಚರಣೆಗೆ- ಶಾಸಕ ಎಸ್ ಟಿ ಸೋಮಶೇಖರ್ ಚಾನಲ್

Bharath Vaibhav
ಯಶವಂತಪುರ ಕ್ಷೇತ್ರದಲ್ಲಿ ಸಂಕ್ರಾಂತಿ ಸುಗ್ಗಿ’ ಸಂಭ್ರಮಾಚರಣೆಗೆ- ಶಾಸಕ ಎಸ್ ಟಿ ಸೋಮಶೇಖರ್ ಚಾನಲ್
WhatsApp Group Join Now
Telegram Group Join Now

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ಹೇರೋಹಳ್ಳಿಯಲ್ಲಿರುವ ಶಾಸಕ ಎಸ್ ಟಿ ಸೋಮಶೇಖರ್ ಅವರ ನೇತೃತ್ವದಲ್ಲಿ ನಾಡ ಪ್ರಭು ಕೆಂಪೇಗೌಡರ ಭವನದಲ್ಲಿ ‘ಸಂಕ್ರಾಂತಿ ಸುಗ್ಗಿ ಸಂಭ್ರಮಾಚರಣೆ ಪ್ರಯುಕ್ತ
ಸಿದ್ಧಿವಿನಾಯಕನ ಮೂರ್ತಿಗೆ ಪೂಜೆ ಪುನಸ್ಕಾರ ಸಲ್ಲಿಸಿ ಜೊತೆಗೆ ಗೋ ಪೂಜೆ, ರೈತರ ಬೆಳೆದ ದವಸ-ಧಾನ್ಯಗಳಿಗೆ ಪೂಜೆ ಶಾಸಕ ಎಸ್ ಟಿ ಸೋಮಶೇಖರ್ ಶ್ರದ್ಧಾಭಕ್ತಿಯಿಂದ ನಡೆಸಿಕೊಟ್ಟರು.

ಮಹಿಳೆಯರಿಗಾಗಿ ವಿಶೇಷ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದ ಮಹಿಳೆಯರಿಗೆ ಶಾಸಕ ಎಸ್ ಟಿ ಸೋಮಶೇಖರ್ ಅವರು ಬಹುಮಾನ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಸಂಕ್ರಾಂತಿ ಹಬ್ಬದ ನಿಮಿತ್ತ ಸಾರ್ವಜನಿಕರಿಗೆ ಎಳ್ಳು-ಬೆಲ್ಲ, ಗೆಣಸು, ಕಡಲೆಕಾಯಿ ಕಬ್ಬು ಸೇರಿದಂತೆ ಕಿಟ್ ಗಳನ್ನು ವಿತರಿಸಿ ಶಾಸಕ ಎಸ್ ಟಿ ಸೋಮಶೇಖರ್ ಅವರು ಸಂಕ್ರಾಂತಿ ಹಬ್ಬದ ಶುಭ ಕೋರಿ ಮಾತಾಡಿದ ಅವರು ತಂತ್ರಜ್ಞಾನ ಯುಗದಲ್ಲಿ ಹಳ್ಳಿಯ ಸೊಗಡು ನಾಡಿನ ಪರಂಪರೆ ಸಂಪ್ರದಾಯಗಳು ಉಳಿಸಿ ಬೆಳೆಸಿ ಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರಿ ಇದೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಸಲಹೆ ನೀಡಿ ಮಾತನಾಡಿದರು.
‌ ನಂತರ ಎತ್ತಿನ ಬಂಡಿ (ಗಾಡಿ) ಮೆರವಣಿಗೆ ಚಾಲನೆ ನೀಡಿದರು ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ ಕೋಲಾಟ ಜಾನಪದ ನೃತ್ಯ ಮನೋರಂಜನೆ ಕಾರ್ಯಕ್ರಮ ಜರುಗಿದವು. ಸಾರ್ವಜನಿಕರಿಗೆ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಮಹಿಳೆಯರ ಕೋಲಾಟದಲ್ಲಿ ಶಾಸಕ ಎಸ್ ಟಿ ಸೋಮಶೇಖರ್ ಹೆಚ್ಚೆ ಹಾಕಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು ಮಹಿಳೆಯರು ಕಾರ್ಯಕರ್ತರು ಮತ್ತು ಬ್ಲಾಕ್ ಮಾಜಿ ಅಧ್ಯಕ್ಷರು ಹಾಲಿ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು ವಿವಿಧ ಘಟಕಗಳ ಪ್ರಮುಖರು ಸಾರ್ವಜನಿಕರ ಮುಂತಾದವರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!