Ad imageAd image

ಸಮುದಾಯದ ಅನುಕೂಲಕ್ಕಾಗಿ ಹೋರಾಟ ಮಾಡಿದ್ದೆ: ಶಾಸಕ, ವಿಜಯಾನಂದ ಕಾಶಪ್ಪನವರ್,

Bharath Vaibhav
ಸಮುದಾಯದ ಅನುಕೂಲಕ್ಕಾಗಿ ಹೋರಾಟ ಮಾಡಿದ್ದೆ: ಶಾಸಕ, ವಿಜಯಾನಂದ ಕಾಶಪ್ಪನವರ್,
WhatsApp Group Join Now
Telegram Group Join Now

ಶರಣ ವಕೀಲರ ವೇದಿಕೆ ಕರ್ನಾಟಕ ವತಿಯಿಂದ ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಬೆಂಗಳೂರು, ಜು.28, 2024

ವೀರಶೈವ ಲಿಂಗಾಯತ ಸಮುದಾಯದಲ್ಲಿರುವ ಬಡವರು, ಕಷ್ಟದಲ್ಲಿ ಇರುವವರಿಗೆ ಒಳಿತಾಗಲಿ ಎನ್ನುವ ಕಾರಣಕ್ಕೆ ಮೀಸಲಾತಿ ಹೋರಾಟ ಮಾಡಿದ್ದೇನೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು.

ಶರಣ ವಕೀಲರ ವೇದಿಕೆ ಕರ್ನಾಟಕ ವತಿಯಿಂದ ವಿಜಯ ನಗರದ ಶ್ರೀ ಅಲ್ಲಮಪ್ರಭು ಆತ್ಮಜ್ಞಾನ ಮಂಟಪದಲ್ಲಿ ಸಮಾಜದ ಗಣ್ಯರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕಾಶಪ್ಪನವರ್, ಸಮುದಾಯದ ಬಡವರಿಗಾಗಿ, ಅವರಿಗೆ ಸೌಲಭ್ಯ ಕೊಡಿಸಲು ನಾನು ಹೋರಾಟ ಮಾಡಿದ್ದೇನೆ. ನನ್ನ ಸ್ವಾರ್ಥ ಏನು ಇರಲಿಲ್ಲ ಎಂದರು.

ಬಸವಣ್ಣನವರು ಸಮಾಜದ ಎಲ್ಲಾ ವರ್ಗದವರ ಒಳಿತಿಗಾಗಿ ಹೋರಾಟ ಮಾಡಿದರು. ಅದರಲ್ಲೂ ತಳ ಸಮುದಾಯಗಳು, ದೌರ್ಜನ್ಯಕ್ಕೆ ಒಳಗಾದವರಿಗೆ ಹಕ್ಕುಗಳನ್ನು ಕೊಡಿಸಲು ಹೋರಾಡಿದರು. ಬಸವಣ್ಣನವರ ಸಂದೇಶಗಳು ಎಂದಿಗೂ ಮಾದರಿಯಾಗಿರುತ್ತವೆ. ವಕೀಲರ ಸಂಘದ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕಾಶಪ್ಪನವರ್ ಹೇಳಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠ ಶ್ರೀ ಪರಮಪೂಜ್ಯ ಜಗದ್ಗುರು ಶಿವರಾತ್ರೀಶ್ವರ ರಾಜದೇಶೀಕೇಂದ್ರ ಮಹಾಸ್ವಾಮಿಜೀ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ,ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್, ಶರಣ ವಕೀಲರ ವೇದಿಕೆಯ ಹೆಚ್.ಎಸ್. ಚಂದ್ರಮೌಳಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!