ಇಳಕಲ್ : ಧಾನಸೌಧದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿದ್ದ ಪುಸ್ತಕ ಮೇಳದಲ್ಲಿ ಶಾಸಕರಾದ ವಿಜಯಾನಂದ ಕಾಶಪ್ಪನವರ್ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ, ಹಲವಾರು ಕನ್ನಡ ಪುಸ್ತಕಗಳನ್ನು ಖರೀದಿಸಿದರು.

ಇದೇ ಸಂದರ್ಭದಲ್ಲಿ ವಿಜಯಾನಂದ್ ಕಾಶಪ್ಪನವರ್ ರವರು ಮಾತನಾಡಿ ಕನ್ನಡ ಭಾಷೆ ಹೃದಯದಿಂದ ಆಡುವ ಭಾಷೆಯಾಗಿದೆ. 8ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಸಿಕ್ಕಿದೆ ಎಂದರೆ ಕನ್ನಡ ಭಾಷೆ ಎಷ್ಟು ಸಾಹಿತ್ಯಮಯವಾಗಿದೆ ಎಂದು ತಿಳಿಯುತ್ತದೆ.

ಕನ್ನಡ ನಾಡು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ತಿಳಿಯಬೇಕು ನಾವು ಪ್ರಬುದ್ದರಾಗಬೇಕು ಎಂದರೆ ಕನ್ನಡ ಪುಸ್ತಕಗಳನ್ನು ಓದಬೇಕು.
ಕನ್ನಡ ಸಾಹಿತ್ಯ ಉಳಿಯಬೇಕು ಎಂದರೆ ಪ್ರತಿಯೊಬ್ಬರು ಪುಸ್ತಕಗಳನ್ನು ಕೊಂಡು ಓದಬೇಕು.
ಕನ್ನಡ ಭಾಷೆಗೆ 2000ಸಾವಿರ ವರ್ಷಗಳ ಇತಿಹಾಸವಿದೆ, ನಾವು ಭಾಷೆ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿದಿದೆ ಎಂದು ಹೇಳಿದರು.
ವರದಿ : ದಾವಲ್ ಶೇಡಂ




