ವಿಜಯಪುರ : ಬಿಜೆಪಿ ಪಕ್ಷದಿಂದ ಹೊರ ಹಾಕಿದರೂ ನನಗೆ ಪಕ್ಷೇತರನಾಗಿ ಗೆದ್ದು ಬರುವ ತಾಕತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟು ಬಾರಿ ಪಕ್ಷದಿಂದ ಹೊರಹಾಕಿದರೂ ನನ್ನ ಮೇಲೆ ಅದು ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದರು.
ವಿಜಯಪುರದ ಮಹಾನಗರ ಪಾಲಿಕೆ ಸಿಬ್ಬಂದಿಗಳು ಧೈರ್ಯವಾಗಿ ಇರಿ. ಕೆಲವರು ಹಚ್ಚುವುದು ಚುಚ್ಚುವುದು ಮಾಡುತ್ತಲೇ ಇರುತ್ತಾರೆ. ಯಾವ ಒತ್ತಡಕ್ಕೂ ಮಣಿಯಬೇಡಿ , ಬಿಜೆಪಿಯಲ್ಲಿಯೂ ಕೆಲವು ಒಳ್ಳೆಯ ಶಾಸಕರಿದ್ದಾರೆ ಎಲ್ಲರೂ ನಿಮ್ಮ ಪರವಾಗಿ ಹೋರಾಡಲಿದ್ದಾರೆ ಎಂದರು.
ಸತ್ಯ ನುಡಿಯುತ್ತೇವೆ ಎಂಬ ಕಾರಣದಿಂದಲೇ ನಮ್ಮನ್ನು ಪಕ್ಷದಿಂದ ಹೊರಗೆ ಹಾಕಲಾಗಿದೆ. ಇವೆಲ್ಲವೂ ನಮ್ಮ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು ಯತ್ನಾಳ್, ಜನರು ನಮ್ಮ ಹಿಂದಿದ್ದಾರೆ. ಹೀಗಾಗಿ ನಮಗೆ ಯಾವುದೇ ಚಿಂತೆಯಿಲ್ಲ ಎಂದರು.