ಹುಬ್ಬಳ್ಳಿ: ಮೊನ್ನೆ ಮೊನ್ನೆಯಷ್ಟೇ ದೆಹಲಿಗೆ ಹೋಗಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಹಾಜರಾಗಿ ವರಿಷ್ಠರ ಪ್ರಶ್ನೆಗಳಿಗೆ ಉತ್ತರಿಸಿ ಬಂದಿದ್ದ ಯತ್ನಾಳ್,ಎರಡು ದಿನ ಸುಮ್ಮನಿದ್ದರು.
ಆದ್ರೆ ಈಗ ಮತ್ತೆ ಹೊಸ ವರಸೆ ತೆಗೆದಿದ್ದಾರೆ. ನಾನು ಸದ್ಯಕ್ಕೆ ಸೈಲೆಂಟ್ ಮುಂದೆ ಒಬ್ಬೊಬ್ಬರಾಗಿ ವೈಲೆಂಟ್ ಆಗುತ್ತಾ ಹೋಗುತ್ತೇವೆ ಎಂದು ಯತ್ನಾಳ್ ಹೇಳಿದ್ದಾರೆ.
ನಾವೆಲ್ಲ ನಾಯಕರು ಒಟ್ಟಾಗಿದ್ದೇವೆ.ನಮ್ಮ ಟೀಮ್ ಈ ರೀತಿ ಪ್ಲಾನ್ ಮಾಡಿಕೊಂಡಿದ್ದೇವೆ.ಇನ್ಮೇಲೆ ನಾನು ಸ್ವಲ್ಪ ಸೈಲೆಂಟ್ ಆಗ್ತಿನಿ,ಆದ್ರೆ ನಮ್ಮ ರಮೇಶ ಜಾರಕಿಹೊಳಿ ಇನ್ಮುಂದೆ ವೈಲೆಂಟ್ ಆಗಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಈ ವೇಳೆ ಹೈ ಕಮಾಂಡ್ ಭೇಟಿ ಮಾಡಿದ ಬಗ್ಗೆ ಮಾತನಾಡಿದ ಯತ್ನಾಳ್, ನನ್ನ ಮೇಲೆ ನಮ್ಮ ಹೈಕಮಾಂಡ್‌ಗೆ ಪ್ರೀತಿ ಇದೆ. ನನ್ನನ್ನು ಮುಗಿಸುತ್ತೇನೆ ಎಂಬುದೆಲ್ಲಾ ಸುಳ್ಳು.ಯಾರಿಂದಲೂ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಅಂತ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.