Ad imageAd image

ಕಾಂಗ್ರೆಸ್ ಲಿಂಗಾಯಿತರ ವಿರೋಧಿ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದ್ದಾರೆ : ಶಾಸಕ ಯತ್ನಾಳ್

Bharath Vaibhav
ಕಾಂಗ್ರೆಸ್ ಲಿಂಗಾಯಿತರ ವಿರೋಧಿ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದ್ದಾರೆ : ಶಾಸಕ ಯತ್ನಾಳ್
YATNAL
WhatsApp Group Join Now
Telegram Group Join Now

ಧಾರವಾಡ: ಕಾಂಗ್ರೆಸ್ ಪಕ್ಷ ಲಿಂಗಾಯಿತರ ವಿರೋಧಿ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಲಿಂಗಾಯತರೆಂದರೆ ನಮ್ಮ ಪಕ್ಷದವರಿಗೆ ಒಂದು ರೀತಿ ಅಲರ್ಜಿ ಇದೆ. ಹೀಗಾಗಿ ಮೀಸಲಾತಿ ಕೊಡುವುದಕ್ಕೆ ನಮ್ಮ ಕಡೆಯಿಂದ ಆಗುವುದಿಲ್ಲ ಸಹೋದರ ಎಂದು ನನ್ನ ಬಳಿ ಸಚಿವೆ ಲಕ್ಷ್ಮಿ ಹೇಳಿದ್ದಾರೆ ಎಂದು ಧಾರವಾಡ ಜಿಲ್ಲೆ ಮುರಬ ಗ್ರಾಮದಲ್ಲಿ ನಡೆದ ಪ್ರಹ್ಲಾದ ಜೋಶಿ ಪರ ಪ್ರಚಾರ ಸಭೆಯಲ್ಲಿ ಶಾಸಕ ಯತ್ನಾಳ್ ತಿಳಿಸಿದ್ದಾರೆ.

ನಮ್ಮ ಬಿಜೆಪಿ ಸರ್ಕಾರ ಲಿಂಗಾಯಿತರಿಗೆ 2ಡಿ ಮೀಸಲಾತಿ ಕೊಟ್ಟಿತ್ತು. ಧಾರವಾಡ ಅಂಜುಮನ್ ಸಂಸ್ಥೆಯ ವ್ಯಕ್ತಿ ಪಿಐಎಲ್ ಹಾಕಿದ್ದಾರೆ. 2ಡಿ ಡಿ ಮೀಸಲಾತಿ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಹಾಕಿದ್ದಾರೆ. ಇದಕ್ಕೆ ಕಾಂಗ್ರೆಸ್ ಶಾಸಕರು ಏನು ಉತ್ತರ ಕೊಡುತ್ತಾರೆ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ಇವರಿಗೆ ಸಿದ್ದರಾಮಯ್ಯ ವಿರುದ್ಧ ನಿಂತು ಮಾತನಾಡುವ ಧೈರ್ಯವಿಲ್ಲ. 2ಡಿ ಮೀಸಲಾತಿ ಬಗ್ಗೆ ಮಾತನಾಡಲು ಬೆಳಗಾವಿ ಅಧಿವೇಶನದ ವೇಳೆ ಸಿದ್ದರಾಮಯ್ಯ ಅವಕಾಶ ಕೊಡಲಿಲ್ಲ. ಆಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಿಎಂ ಅಪಾಯಿಂಟ್ಮೆಂಟ್ ಸಿಗುತ್ತಾ ಎಂದು ಕೇಳಿದ್ದೆವು. ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಮ್ಮ ಪಾರ್ಟಿ ಲಿಂಗಾಯಿತರ ವಿರೋಧಿ ಇದೆ ಅಂತ ಹೇಳಿದ್ದರು.

ಈ ಬಗ್ಗೆ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಮುಂದೆ ಬೇಕಾದರೂ ಪ್ರಮಾಣ ಮಾಡುತ್ತೇನೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ಮುಂದೆ ಈ ಈ ರೀತಿ ಹೇಳಿದ್ದಾರೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!