ಬೆಳಗಾವಿ: ಬಿಜೆಪಿಗೆ ವಾಪಾಸ್ ಬನ್ನಿ ಎಂದು ನನಗೆ ಆಹ್ವಾನ ನೀಡಿದ್ದಾರೆ. ಆದರೆ ನನ್ನನ್ನು ಮುಖ್ಯಮಂತ್ರಿ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ವಾಪಾಸ್ ಹೋಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬೇಡಿಕೆ ಇಟ್ಟಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸ್ವತಃ ಆರ್.ಅಶೋಕ್ ಅವರೇ ನನ್ನನ್ನು ಚೇಂಬರ್ ಗೆ ಕರೆದು ಮಾತನಾಡಿದರು.
ಯತ್ನಾಳ್ ಅವರೇ ನೀವು ಬಿಜೆಪಿಗೆ ವಾಪಾಸ್ ಆಗಲೇಬೇಕು. ಬಿಜೆಪಿ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ನೀವು ಪಕ್ಷಕ್ಕೆ ಮರಳಿ ಬನ್ನಿ ಎಂದಿದ್ದಾರೆ. ಆದರೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ಮರಳಿ ಬರುತ್ತೇನೆ ಎಂದು ಹೇಳಿದ್ದೇನೆ ಎಂದರು.
ದೆಹಲಿಗೆ ನಿಯೋಗದೊಂದಿಗೆ ಹೋಗಿ ಅಮಿತ್ ಶಾ ಅವರನ್ನು ಭೇಟಿಯಾಗುವ ಕುರಿತೂ ಚರ್ಚೆ ನಡೆಸಲಾಯಿತು.
ಏನೇ ಇದ್ದರೂ ನಾನು ಸುಮ್ಮನೇ ಬಿಜೆಪಿಗೇ ಹೋಗಲ್ಲ. ನನ್ನನ್ನು ಸಿಎಂ ಮಾಡ್ತಾರೆ ಅನ್ನುವುದಾದರೆ ಮಾತ್ರ ಹೋಗುತ್ತೇನೆ. ಇಲ್ಲವಾದಲ್ಲಿ ನಾವೇ ಜೆಸಿಬಿ ಪಕ್ಷವನ್ನು ಕಟ್ಟುತ್ತೇವೆ ಎಂದು ಹೇಳಿದರು.




