ಹುಬ್ಬಳ್ಳಿ: ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಜವಹರಲಾಲ್ ನೆಹರು ಪಾತ್ರವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಶಾಸಕ ಯತ್ನಾಳ್ , ಗೋಡ್ಸೆ ಹೊಡೆದಿದ್ದು ಕೇವಲ ಒಂದು ಗುಂಡು ಮಾತ್ರ. ಆದರೆ ಉಳಿದ ಎರಡು ಗುಂಡುಗಳು ಯಾರವು..?ಆ ಎರಡು ಗುಂಡುಗಳನ್ನು ಹೊಡೆಸಿದ್ದು ಜವಹರಲಾಲ್ ನೆಹರು ಎಂದು ಹೇಳಿದರು.
ಕಾಂಗ್ರೆಸ್ ಡಾ. ಬಿ.ಆರ್ ಅಂಬೇಡ್ಕರ್ ಗೆ ಸಾಕಷ್ಟು ಅಪಮಾನ ಮಾಡಿದೆ. ಈಗ ಕಾಂಗ್ರೆಸ್ ಅಂಬೇಡ್ಕರ್ ಹೆಸರನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇವರಿಗೆ ಜೈ ಭೀಮ್ ಎನ್ನುವ ಯಾವುದೇ ಅರ್ಹತೆ ಇಲ್ಲ ಎಂದರು.
ನನ್ನ ಮೇಲೆ ಮತ್ತು ಸಿಟಿ ರವಿಯನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಹಿಂದೂಗಳ ಬಗ್ಗೆ ನಾವು ಮಾತನಾಡಿದರೆ ಕೇಸ್ ಹಾಕುತ್ತಾರೆ. ಆದರೆ ವಿಜಯೇಂದ್ರನ ಮೇಲೆ ಮಾತ್ರ ಕೇಸ್ ಹಾಕಲ್ಲ. ಹಿಂದೂಗಳ ಭಾವನೆ ಕೇರಳಿಸಿ, ರಾಜ್ಯದಲ್ಲಿ ದಂಗೆ ಏಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.




