ಮಲಪ್ರಭಾ ಸಕ್ಕರೆ ಕಾರ್ಖಾನೆಯ ಹಿತಕ್ಕಾಗಿ ಚುನಾವಣೆಗೆ ನಮ್ಮ ಸ್ಪರ್ಧೆ ಖಚಿತ.!

ಹಿರೇಬಾಗೆವಾಡಿ: ಹೌದು ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾ.ಪಂ ವ್ಯಾಪ್ತಿಯ ಸಿದ್ದನಬಾವಿ ಕೆರೆಗೆ ಬಾಗಿನ ಅರ್ಪಿಸಿ ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಚೆನ್ನರಾಜು ಹಟ್ಟಿಹೊಳಿ ಸಿದ್ದನಬಾವಿ ಕೆರೆಯು ಈ ಭಾಗದ ರೈತಾಪಿ ವರ್ಗಕ್ಕೆ ಅನುಕೂಲವಾಗಿದೆ ಎಂದು ಹೇಳಿ ನಂತರ ಮಲಪ್ರಭಾ ಕಾರ್ಖಾನೆ ಹಿತದೃಷ್ಟಿಯಿಂದ ನಾವು ಚುನಾವಣೆಗೆ ನಿಲ್ಲುತ್ತೇವೆ ಎಂದು ಹೇಳಿದರು.
Dcc ಬ್ಯಾಂಕ್ ಚುನಾವಣೆಗೆ ರೈತರ ಹಿತದೃಷ್ಟಿಯಿಂದ ನಾವು ಕೆಲಸ ಮಾಡುತ್ತೇವೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಹಿರೇಬಾಗೇವಾಡಿ ಸರ್ವ ಪೂಜ್ಯ ಶ್ರೀಗಳು ಹಾಗೂ ಗ್ರಾ.ಪಂ ಆಡಳಿತ ಮಂಡಳಿ ಸೇರಿದಂತೆ ಎಲ್ಲಾ ಹಿರೇಬಾಗೇ ವಾಡಿ ಭಾಗದ ಮುಖಂಡರು, ರೈತರು ಉಪಸ್ಥಿತರಿದ್ದರು.
ವರದಿ: ಬಸವರಾಜು




