Ad imageAd image

ಬೆಳಗಾವಿ ಕಲಾಪದ ವೇಳೆ ಬಂಧನ ಕೇಸ್:ಡಿಜಿ & ಐಜಿಪಿಗೆ MLC ಸಿ.ಟಿ ರವಿ ದೂರು

Bharath Vaibhav
ಬೆಳಗಾವಿ ಕಲಾಪದ ವೇಳೆ ಬಂಧನ ಕೇಸ್:ಡಿಜಿ & ಐಜಿಪಿಗೆ MLC ಸಿ.ಟಿ ರವಿ ದೂರು
WhatsApp Group Join Now
Telegram Group Join Now

ಬೆಂಗಳೂರು: ನಿನ್ನೆಯಷ್ಟೇ ರಾಜ್ಯಪಾಲರಿಗೆ ಬೆಳಗಾವಿ ಕಲಾಪದ ವೇಳೆಯಲ್ಲಿ ಬಂಧನ ಸಂಬಂಧ ಡಿಜಿ ಅಂಡ್ ಐಜಿಪಿ ಕರೆದು ಹೇಳಿಕ ಪಡೆಯುವಂತೆ ಸಿ.ಟಿ ರವಿ ದೂರು ನೀಡಿದ್ದರು. ಇಂದು ಡಿಜಿ ಮತ್ತು ಐಜಿಪಿಯವರನ್ನು ಭೇಟಿ ಮಾಡಿ, 8 ಪುಟಗಳ ದೂರು ನೀಡಿದ್ದಾರೆ. ಇಂದು ಬೆಂಗಳೂರಲ್ಲಿ ಡಿಜಿ ಮತ್ತು ಐಜಿಪಿ ಅವರನ್ನು ಭೇಟಿಯಾದಂತ ಸಿ.ಟಿ ರವಿ ಹಾಗೂ ಬಿಜೆಪಿ ಮುಖಂಡರು, ಬೆಳಗಾವಿ ಕಲಾಪದ ವೇಳೆಯಲ್ಲಿ ಬಂಧನದ ವಿರುದ್ಧ ಬೆಳಗಾವಿ ಎಸ್ಸಿ, ಕಮೀಷನರ್ ವಿರುದ್ಧ ಆರೋಪಿಸಿ ದೂರು ನೀಡಿದರು.

ಸುಮಾರು 8 ಪುಟಗಳ ದೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಲಕ್ಷ್ಮೀ ಹೆಬ್ಬಾಳ್ಳ‌ ವಿರುದ್ಧವೂ ಆರೋಪಿಸಲಾಗಿದೆ. ತಮ್ಮನ್ನು ಎತ್ತಿ ಪಶುವಿನ ರೀತಿಯಲ್ಲಿ ಕಿಡ್ನಾಪ್ ಮಾಡಿದ್ದಾರೆ. ಬೆಳಗಾವಿ ಪೊಲೀಸ್ ಕಮೀಷನರ್, ಎಸ್ಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಇಡೀ ಸನ್ನಿವೇಶ ಫೇಕ್ ಎನ್ ಕೌಂಟರ್ ರೀತಿ ಇತ್ತು. ಲೈಸನ್ ಸುಫಾರಿ ಕಿಲ್ಲರ್ ರೀತಿ ಇತ್ತು ಎಂಬುದಾಗಿಯೂ ಆರೋಪಿಸಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿ ಮತ್ತು ಐಜಿಪಿ ಅವರಿಗೆ ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!