ಉತ್ತರ ಕನ್ನಡ: ಹೌದು ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಹಾಗೂ ಯಲ್ಲಾಪುರ ಕ್ಷೇತ್ರಗಳ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಾಸ ಮಾಡುವ ಸಿದ್ಧಿ ಸಮುದಾಯಕ್ಕೆ ಬಹುತೇಕ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯವಿಲ್ಲದೇ ಹಾಗೂ ಸೌಲಭ್ಯಗಳನ್ನು ತೆಗೆದುಕೊಳ್ಳಲಾಗದೇ ಪರಿತಪಿಸುತ್ತಿರುವ ಸಿದ್ದಿ ಸಮುದಾಯದ ಕಣ್ಣೀರಿನ ಕಥೆ ಮತ್ತು ವ್ಯಥೆ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ ಕಣ್ರೀ..!

5 ಶತಮಾನಗಳ ಹಿಂದೆ ಬ್ರಿಟಿಷರು ಮತ್ತು ಪೋರ್ಚುಗೀಸರು ಆಫ್ರಿಕಾ ದೇಶದ ಕಾಡಿನಲ್ಲಿ ವಾಸಿಸುವ ಜನರನ್ನು ಭಾರತಕ್ಕೆ ಕರ್ನಾಟಕದ ಕರಾವಳಿಯ ಮೂಲಕ ನೌಕೆಗಳಲ್ಲಿ ತಂದು ಇಲ್ಲಿ ಗುಲಾಮಿಪದ್ಧತಿಯಲ್ಲಿ ಬಳಸುತ್ತಾರೆ. ನಂತರ ಸ್ವಾತಂತ್ರ್ಯ ಪೂರ್ವದವರೆಗೂ ಅವರನ್ನು ಬಳಸಿಕೊಂಡು 1947 ರಲ್ಲಿ ಸ್ವಾತಂತ್ರ್ಯ ಬಂದಾಗ ಬ್ರಿಟಿಷರು ತಮ್ಮ ದೇಶಗಳಿಗೆ ಹೊರಟು ಹೋಗುತ್ತಾರೆ. ಆದ್ರೆ ಇದೇ ಸಿದ್ಧಿ ಸಮುದಾಯದ ಪೂರ್ವಜರು ಇಲ್ಲೇ ನೆಲೆಗೊಂಡು ಇಲ್ಲೇ ಉಳಿದು ಬಿಡುತ್ತಾರೆ. ಅಂದಿನಿಂದ ಇಂದಿನವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇವರ ಜನಸಂಖ್ಯೆ ಎಪ್ಪತ್ತು ಸಾವಿರ ಕ್ಕೂ ಹೆಚ್ಚಿದೆ.

ಆದ್ರೆ ಅರಣ್ಯ ಪ್ರದೇಶದ ವ್ಯಾಪ್ತಿಯ ಸಿದ್ಧಿ ಕುಟುಂಬಗಳ ಸಾಮಾಜಿಕ ಸಬಲೀಕರಣ ಮಾತ್ರ ಅಷ್ಟಕ್ಕೆ ಅಷ್ಟೇ..! ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯಕ್ಕೆ ತಾರತಮ್ಯ, ಶೈಕ್ಷಣಿಕವಾಗಿ ಉತ್ತೇಜಿಸಲು ಸರ್ಕಾರಿ ಶಾಲೆಗಳನ್ನು ಉನ್ನತಿಕರಣ ಮಾಡದೇ ಇರುವುದು, ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡದೇ ಇರುವುದು, ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡದೇ ತಾರತಮ್ಯ ಮಾಡುತ್ತಿರುವುದು, ಅರಣ್ಯ ಇಲಾಖೆಯಿಂದ ದಿನನಿತ್ಯ ಟಾರ್ಚರ್ ಆಗುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಇವರಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ಇವರ ವೋಟ್ ಬ್ಯಾಂಕ್ ಮಾತ್ರ ಸೀಮಿತ ಮಾಡಿಕೊಂಡರೆ ಎಂಬ ಸಂಶಯ ಕಾಡುತ್ತಿದೆ.
ಇನ್ನೊಂದು ಕಡೆ ಸಮಜಕಲ್ಯಾಣ ಇಲಾಖೆ ವತಿಯಿಂದ ನೀಡುವ ಕಿಟ್ ಗಳಲ್ಲಿರುವ ತುಪ್ಪವನ್ನು ಸಹ ವಾಪಸ್ ಪಡೆದು 1 ಕೆ.ಜಿ ಎಣ್ಣೆ ವಿತರಣೆ ಮಾಡುತ್ತಾರಂತೆ. ಇನ್ನೂ ಈ ಸಮುದಾಯವನ್ನು ಪ್ರತಿನಿಧಿಸುವ Mlc ಯವರು ಆದ ಶಾಂತರಾಮ ಸಿದ್ದಿಯವರು ಮಾತ್ರ ತುಟಿಕ್ ಪಿಟಿಕ್ ಎಂದಿಲ್ಲಾ ಎನ್ನುತ್ತಾರೆ ಸಿದ್ಧಿ ಸಮುದಾಯದ ಹಿರಿಯರು. ಆದ್ದರಿಂದ ಇವರ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಸಿದ್ಧಿ ಸಮುದಾಯದ ಕಣ್ಣೀರನ್ನು ಸರ್ಕಾರ ಒರೆಸುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬಸವರಾಜು




